ಲಾಕ್‍ಡೌನ್ ಸಡಿಲಿಕೆ-ಗ್ರೀನ್ ಝೋನ್‍ನಲ್ಲಿರುವ 14 ಜಿಲ್ಲೆಗಳಿಗೆ ಸರ್ಕಾರದಿಂದ ಷರತ್ತು ಬದ್ಧ ವಿನಾಯಿತಿ…

651
firstsuddi

ಬೆಂಗಳೂರು : ಮಹಾಮಾರಿ ಕೊರೊನಾ ವೈರಸ್‍ನಿಂದ ಲಾಕ್‍ಡೌನ್ ಆಗಿರುವ ಗ್ರೀನ್ ಜೋನ್‍ನಲ್ಲಿರುವ ಜಿಲ್ಲೆಗಳಿಗೆ ಸರ್ಕಾರ ಷರತ್ತು ಬದ್ಧ ವಿನಾಯಿತಿಯನ್ನು ನೀಡಿದೆ. ಗ್ರೀನ್ ಝೋನ್‍ನಲ್ಲಿರುವ 14 ಜಿಲ್ಲೆಗಳಲ್ಲಿ ಲಾಕ್‍ಡೌನ್ ಸಡಿಲಿಕೆ ಆಗಿದ್ದು, ಇಂದಿನಿಂದ ಮೇ,3ರ ವರೆಗೆ ರಾಜ್ಯ ಸರ್ಕಾರ ಷರತ್ತುಬದ್ಧ ವಿನಾಯಿತಿಯನ್ನು ಪ್ರಕಟಿಸಿದೆ.
ಗ್ರೀನ್ ಝೋನ್‍ನಲ್ಲಿರುವ ಜಿಲ್ಲೆಗಳಾದ ಚಿಕ್ಕಮಗಳೂರು, ರಾಯಚೂರು, ಚಾಮರಾಜನಗರ, ರಾಮನಗರ, ಶಿವಮೊಗ್ಗ, ಕೊಪ್ಪಳ, ಕೋಲಾರ, ಯಾದಗಿರಿ, ದಾವಣಗೆರೆ, ಕೊಡಗು, ಉಡುಪಿ, ಹಾವೇರಿ, ಚಿತ್ರದುರ್ಗ, ಹಾಸನ ಜಿಲ್ಲೆಗಳಿಗೆ ವಿನಾಯಿತಿ ಸಿಕ್ಕಿದ್ದು, ರಾಮನಗರದಲ್ಲಿ ಕೈಗಾರಿಕೆ ಹೊರತು ಪಡಿಸಿ ಉಳಿದ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ದೊರಕಿದೆ.
• ಸಣ್ಣ ಅಂಗಡಿಗಳು, ಪಾಲಿಕೆ ವ್ಯಾಪ್ತಿಯ ಅಂಗಡಿ ತೆರೆಯಲು ಅವಕಾಶ.
• ಮೇ, 3ರ ವರೆಗೆ ಮಧ್ಯ ಮಾರಾಟ ಮಾಡುವಂತಿಲ್ಲ.
• ಕೈಗಾರಿಕೆಗಳಲ್ಲಿ ಪೂರ್ಣ ಪ್ರಮಾಣದ ಸಿಬ್ಬಂದಿ ಬಳಸಿಕೊಂಡು ಕಾರ್ಯ ನಿರ್ವಹಿಸುವಂತಿಲ್ಲ. ಶೇ.50ರಷ್ಟು ಸಿಬ್ಬಂಧಿಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸಬೇಕು.
• ಕಾರ್ಯ ನಿರ್ವಹಿಸುವ ವೇಳೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಮತ್ತು ಮಾಸ್ಕ್ ಧರಿಸಿ ಕಾರ್ಯ ನಿರ್ವಹಿಸಬೇಕು.
• ಮಾರುಕಟ್ಟೆಗಳ ಕಾಂಪ್ಲೆಕ್ಸ್‍ಗಳಲ್ಲಿ ಕೆಲಸಕ್ಕೆ ಅವಕಾಶ.
• ಮಾಲ್‍ಗಳು ತೆರೆಯುವಂತಿಲ್ಲ.
ಈ ಮಾರ್ಗಸೂಚಿ ಮೇ 3ರ ವರೆಗೆ ಮಾತ್ರ ಅನ್ವಯವಾಗಲಿದ್ದು, ಇನ್ನು ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಉತ್ತರ ಕನ್ನಡ, ಧಾರವಾಡದಲ್ಲಿ ಅಂಗಡಿ ಮತ್ತು ಕೈಗಾರಿಕೆ ತೆರೆಯುವ ಅನುಮತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರ ನಿರ್ಧಾರಕ್ಕೆ ಬಿಡಲಾಗಿದೆ.
ಅಲ್ಲದೇ ಬೆಂಗಳೂರು ನಗರ, ಬೆಳಗಾವಿ, ಮೈಸೂರು, ವಿಜಯಪುರ, ಕಲಬುರಗಿ, ಬಾಗಲಕೋಟೆ, ದಕ್ಷಿಣ ಕನ್ನಡ, ಬೀದರ್ ಜಿಲ್ಲೆಗಳಲ್ಲಿ ಈಗಿನಂತೆ ಲಾಕ್‍ಡೌನ್ ಮುಂದುವರೆಯಲಿದ್ದು, ಯಾವುದೇ ವಿನಾಯಿತಿ ಅನ್ವಯವಾಗುವುದಿಲ್ಲ.