ಚೆನ್ನೈ : ಲೈಂಗಿಕ ಕಿರುಕುಳ ಆರೋಪದ ಮೇಲೆ ತಮಿಳುನಾಡಿನ ಪ್ರತಿಷ್ಠಿತ ಶಾಸ್ತ್ರೀಯ ಕಲೆಗಳ ಸಂಸ್ಥೆಯಾದ ಕಲಾಕ್ಷೇತ್ರದ ಸಹಾಯಕ ಪ್ರೊಫೆಸರ್ ಒಬ್ಬರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ಸಂಸ್ಥೆಯ ಮಾಜಿ ವಿದ್ಯಾರ್ಥಿನಿಯೊಬ್ಬರು ತಮ್ಮ ಮೇಲೆ ಪ್ರೊಫೆಸರ್ ಒಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ದೂರಿನಡಿ ಚೆನ್ನೈ ಪೊಲೀಸರು ಪ್ರೊಫೆಸರ್ ಹರಿ ಪದ್ಮನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಇದರಂತೆ ಇಂದು ಕಲಾಕ್ಷೇತ್ರದ ಸಹಾಯಕ ಪ್ರೊಫೆಸರ್ ಹರಿ ಪದ್ಮನ್ ಅವರನ್ನು ಬಂಧನಕ್ಕೊಳಪಡಿಸಲಾಗಿದೆ.
ಹರಿ ಪದ್ಮನ್ ವಿರುದ್ಧ ಐಪಿಸಿ ಸೆಕ್ಷನ್ 354ಎ (ಲೈಂಗಿಕ ಕಿರುಕುಳ), 509 (ಪದಗಳು, ಸನ್ನೆಗಳು ಅಥವಾ ಮಹಿಳೆಯ ನಮ್ರತೆಯನ್ನು ಅವಮಾನಿಸುವ ಉದ್ದೇಶದಿಂದ ಮಾಡಿದ ಕೃತ್ಯಗಳು), ಮಹಿಳಾ ಕಿರುಕುಳ ಕಾಯ್ದೆ ಸೆಕ್ಷನ್ 4 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.










