ಲೈಂಗಿಕ ದೌರ್ಜನ್ಯ ಆರೋಪ – ಮುರುಘಾ ಶ್ರೀಗಳು ಹೇಳಿದ್ದೇನು?

55
firstsuddi

ಚಿತ್ರದುರ್ಗ : ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಮುರುಘಾ ಶರಣರು ಮಠದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇದೊಂದು ನೋವಿನ ಸಂಗತಿಯಾಗಿದ್ದು, ಭಕ್ತರು ಅತಂಕಪಡಬೇಕಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಬೇಕಿದೆ. ಒಳಗಡೆ ನಡೆಯುತ್ತಿದ್ದ ಪಿತೂರಿಗಳು, ಈಗ ಹೊರಗಡೆ ನಡೆಯುತ್ತಿವೆ. ತಾರ್ಕಿಕವಾಗಿ ಅಂತ್ಯವಾಗಬೇಕಿದೆ ಎಂದರು.

ಈ ನೆಲದ ಕಾನೂನು ಗೌರವಿಸುವಂತಹ ಮಠಾಧೀಶನಾಗಿದ್ದಾನೆ. ಇದರಲ್ಲಿ ಯಾವುದೇ ಪಲಯಾನವಾದ ಇಲ್ಲ. ಯಾವುದೇ ಉಹಾಪೋಗಳಿಗೆ ಅವಕಾಶ ಇಲ್ಲ. ನಾವು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಮುರುಘಾ ಮಠ ಒಂದಾನೊಂದು ಕಾಲದಲ್ಲಿ ಚಲಿಸುವ ನ್ಯಾಯಾಲಯವಾಗಿತ್ತು. ನಾವು ಸಹ ನ್ಯಾಯದ ಸ್ಥಾನದಲ್ಲಿದ್ದೇವೆ. ಭಕ್ತರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು. ಕಾನೂನು ಗೌರವಿಸೋಣ. ಇಂತಹ ನೋವಿನ ಸಂಗತಿಯಲ್ಲಿ ಮಠದ ಭಕ್ತರು ಜೊತೆಗಿದ್ದಾರೆ. ತನಿಖೆಗ ಎಲ್ಲಾ ರೀತಿಯ ಸಹಕಾರ ಕೊಡುತ್ತೇನೆ. ಎಲ್ಲರಿಗೂ ಶುಭವಾಗಲಿ ಎಂದು ಹೇಳಿದರು.