ವರದಕ್ಷಿಣೆಯಾಗಿ ಹಳೆಯ ಪೀಠೋಪಕರಣ ನೀಡಿದ್ದಕ್ಕೆ ಮದುವೆಯನ್ನೇ ರದ್ದುಗೊಳಿಸಿದ ವರ.

48
firstsuddi

ಹೈದರಾಬಾದ್ : ವಧುವಿನ ಮನೆಯವರು ವರದಕ್ಷಿಣೆಯಾಗಿ ಹಳೆಯ ಪೀಠೋಪಕರಣಗಳನ್ನು ನೀಡಿದ್ದಾರೆ ಎಂಬ ಕಾರಣಕ್ಕೆ ವರ ಮದುವೆಯನ್ನೇ ರದ್ದುಗೊಳಿಸಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ವರ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ನಾವು ವರನ ಮನೆಗೆ ಹೋದಾಗ ವರನ ಪೋಷಕರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು. ಅವರು ಬೇಡಿಕೆ ಇಟ್ಟಿದ್ದ ಸಾಮಾನುಗಳನ್ನು ನೀಡಿಲ್ಲ ಮತ್ತು ಪೀಠೋಪಕರಣಗಳು ಹಳೆಯದಾಗಿವೆ ಎಂದು ಅವರು ಹೇಳಿದರು ಎಂದು ವಧುವಿನ ತಂದೆ ದೂರಿದ್ದಾರೆ.

ನಾನು ಮದುವೆ ಔತಣಕೂಟವನ್ನು ಏರ್ಪಡಿಸಿದ್ದೆ. ಸಂಬಂಧಿಕರು ಮತ್ತು ಅತಿಥಿಗಳನ್ನು ಆಹ್ವಾನಿಸಿದ್ದೆ. ಆದರೆ ಸಮಾರಂಭಕ್ಕೆ ವರ ಬರಲಿಲ್ಲ ಎಂದು ವಧುವಿನ ತಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ವಧುವಿನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.