ವಾರಾಂತ್ಯದಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ‘ಮ್ಯಾಕ್ಸ್’.

59

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮ್ಯಾಕ್ಸ್ ಸಿನಿಮಾ, ಪ್ರೇಕ್ಷಕರಿಂದ ಬಹುತೇಕ ಮೆಚ್ಚುಗೆಯನ್ನು ಪಡೆದಿದೆ. ಗಲ್ಲಾಪೆಟ್ಟಿಗೆಯಲ್ಲೂ ಉತ್ತಮವಾದ ವ್ಯವಹಾರ  ನಡೆದಿದೆ. ಕಳೆದ ದಿನವಷ್ಟೇ ಚಿತ್ರತಂಡ ಸಕ್ಸಸ್ ಸೆಲೆಬ್ರೇಶನ್ ಆಯೋಜಿಸಲಾಗಿತ್ತು. ಸುದೀಪ್ ದೇವಸ್ಥಾನಕ್ಕೆ ಭೇಟಿಯನ್ನು ಕೊಟ್ಟಿದ್ದರು. ವಾರಾಂತ್ಯದಲ್ಲಿ ಭರ್ಜರಿ ಕಲೆಕ್ಷನ್ ಮಾಡೋ ಮೂಲಕ ಮ್ಯಾಕ್ಸ್ ಮ್ಯಾಕ್ಸಿಮಮ್ ಸದ್ದು ಮಾಡುವಲ್ಲಿ ಯಶಸ್ವಿಯಾಗಿದೆ. ವಿಜಯ್ ಕಾರ್ತಿಕೇಯ ನಿರ್ದೇಶನದ ಬಹುನಿರಿಕ್ಷಿತ ಚಿತ್ರ ಕ್ರಿಸ್ಮಸ್ ಸಂದರ್ಭದಲ್ಲಿ ಬಹಳ ಅದ್ಧೂರಿಯಾಗಿ ತೆರೆ ಕಂಡಿತು. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಸಿನಿಮಾಗೆ ಗ್ರ್ಯಾಂಡ್ ವೆಲ್ಕಮ್ ಕೊಟ್ಟಿದ್ದರು. ಕ್ರಿಸ್ಮಸ್ ರಜಾದಿನದಂದು ಮ್ಯಾಕ್ಸ್ ತನ್ನ ಮೊದಲ ದಿನ ಅದ್ಭುತ ಕಲೆಕ್ಷನ್ ಮಾಡಲಾಗಿತ್ತು. ಡಿ.25ರಂದು ಬರೋಬ್ಬರಿ 8.7 ಕೋಟಿ ರೂ. ಕಲೆಕ್ಷನ್ ಮಾಡೋ ಮೂಲಕ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿತು. ನಂತರ ವಾರದ ದಿನಗಳಾದ ಹಿನ್ನೆಲೆ ಕಲೆಕ್ಷನ್ ಅಂಕಿ – ಅಂಶಗಳಲ್ಲಿ ಕೊಂಚ ಏರಿಳಿತ ಕಂಡಿತ್ತು. ಎರಡನೇ ದಿನ ಸಿನಿಮಾ 3.85 ಕೋಟಿ ರೂ.ನ ಕಲೆಕ್ಷನ್ ನಡೆಸಿತ್ತು. ಶುಕ್ರವಾರ ಗಳಿಕೆಯಲ್ಲಿ ಮತ್ತೆ ಹೆಚ್ಚಳವಾಯಿತು. ತನ್ನ ಮೂರನೇ ದಿನ ಚಿತ್ರ 4.7 ಕೋಟಿ ರೂ. ವ್ಯವಹಾರ ನಡೆಸಲಾಗಿತ್ತು. ಸ್ವಲ್ಪ ಮಟ್ಟಿಗೆ ಏರಿಳಿತವಿದ್ದರೂ ವಾರದ ದಿನಗಳಲ್ಲೇ ಉತ್ತಮ ವ್ಯವಹಾರ ನಡೆಸಿದ್ದ ಮ್ಯಾಕ್ಸ್‍ನ ವೀಕೆಂಡ್ ಕಲೆಕ್ಷನ್ ಮೇಲೆ ಬಹುತೇಕರ ಕಣ್ಣಿತ್ತು. ಅದರಂತೆ ಶನಿವಾರ ಸಿನಿಮಾ 4.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಫೈನಲಿ, ಭಾನುವಾರದ ಗಳಿಕೆಯಲ್ಲಿ ಹೆಚ್ಚಿಗೆ ಕಂಡುಬಂದಿದೆ. ಕಳೆದ ದಿನ ಅಂದ್ರೆ ತನ್ನ ಐದನೇ ದಿನ ಚಿತ್ರ 5.86 ಕೋಟಿ ರೂ. ವ್ಯವಹಾರ ನಡೆಸಿದೆ. ಅಲ್ಲಿಗೆ ಸಿನಿಮಾ 5 ದಿನಗಳಲ್ಲಿ ಒಟ್ಟು 27.86 ಕೋಟಿ ರೂ. ಕಲೆಕ್ಷನ್ ಮಾಡಲಾಗಿದೆ. ಈ ಮಾಹಿತಿಯನ್ನು ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿಯಿಂದ ತಿಳಿದುಬಂದಿದೆ.