ವಾರ್ಡ್‍ಗಳಲ್ಲಿ ಒಂದಕ್ಕಿಂತ ಹೆಚ್ಚು ಗಣೇಶನನ್ನು ಕೂರಿಸಲು ಅನುಮತಿ ನೀಡಿದ ಬಿಬಿಎಂಪಿ…

69
firstsuddi

ಬೆಂಗಳೂರು : ಗಣೇಶ ಉತ್ಸವಕ್ಕೆ ಹಲವು ನಿರ್ಬಂಧ ವಿರೋಧಿಸಿದ್ದನ್ನು ಖಂಡಿಸಿ ಇಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಿಬಿಎಂಪಿ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಮಣಿದ ಬಿಬಿಎಂಪಿ ಈಗ ಹಿಂದೆ ಹೊರಡಿಸಿದ್ದ ಮಾರ್ಗಸೂಚಿಯನ್ನು ವಾಪಸ್ ಪಡೆದಿದ್ದು, ವಾರ್ಡ್ ಗಳಲ್ಲಿ ಒಂದಕ್ಕಿಂತ ಹೆಚ್ಚು ಗಣೇಶನನ್ನು ಕೂರಿಸಲು ಅನುಮತಿ ನೀಡಿದೆ.

ಈ ಬಗ್ಗೆ ವಿಶೇಷ ಆಯುಕ್ತ ರಂದೀಪ್ ಪ್ರತಿಕ್ರಿಯಿಸಿ, 140 ವಾರ್ಡ್ ಗಳಲ್ಲಿ ಗಣೇಶನನ್ನು ಕೂರಿಸಲು ಅರ್ಜಿ ಬಂದಿದೆ. ಉಳಿದ ಕಡೆ ದೇವಸ್ಥಾನಗಳಲ್ಲಿ ಗಣಪತಿಯನ್ನು ಕೂರಿಸಲಾಗುತ್ತಿದೆ. ರಸ್ತೆ, ಗ್ರೌಂಡ್ ಗಳಲ್ಲಿ ಬೇಡಿಕೆಗೆ ತಕ್ಕಂತೆ ಗಣೇಶನನ್ನು ಕೂರಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು. ಆದರೆ ಈ ಕುರಿತು ಅಧಿಕೃತ ಆದೇಶ ಇನ್ನೂ ಬಿಡುಗಡೆಗೊಂಡಿಲ್ಲ.