ಜೈಪುರ (ರಾಜಸ್ಥಾನ): ಸೆಲೆಬ್ರಿಟಿ ಜೋಡಿಗಳಾದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ವಿವಾಹ ಮಹೋತ್ಸವ ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ರೆಸಾರ್ಟ್ ನಲ್ಲಿ ಅದ್ದೂರಿಯಾಗಿ ನಡೆಯಲಿದ್ದು, ಈ ಮಧ್ಯೆ ಈ ಜೋಡಿಯು ಅತಿಥಿಗಳನ್ನು ಸ್ವಾಗತಿಸಲು ಒಂದು ವೆಲ್ ಕಮ್ ನೋಟ್ ನೀಡುತ್ತಿದ್ದಾರೆ. ಇದೀಗ ವೆಲ್ ಕಮ್ ನೋಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
‘ನೀವು ಅಂತಿಮವಾಗಿ ಇಲ್ಲಿಗೆ ಬಂದಿದ್ದೀರಿ. ಜೈಪುರದಿಂದ ರಣಥಂಬೋರ್ವರೆಗಿನ ರಸ್ತೆ ಪ್ರವಾಸವನ್ನು ನೀವು ಆನಂದಿಸಿದ್ದೀರಿ ಎಂದು ನಾವು ಭಾವಿಸುತ್ತೇವೆ. ದಯವಿಟ್ಟು ನಾವು ಮಾಡಿದ ಉಪಹಾರವನ್ನು ಸೇವಿಸಿ ಆನಂದಿಸಿ, ವಿಶ್ರಾಂತಿ ಪಡೆದುಕೊಳ್ಳಿ, ಎಂದು ಉಲ್ಲೇಖಿಸಲಾಗಿದೆ. ಇಷ್ಟೇ ಅಲ್ಲದೇ, ದಯವಿಟ್ಟು ನಿಮ್ಮ ಮೊಬೈಲ್ ಫೋನ್ ಗಳನ್ನು ನಿಮ್ಮ ಕೊಠಡಿಗಳಲ್ಲಿ ಬಿಟ್ಟು ಬನ್ನಿ. ಮದುವೆ ಸಮಾರಂಭದ ಯಾವುದೇ ಚಿತ್ರ, ವಿಡಿಯೋಗಳನ್ನು ಸೆರೆ ಹಿಡಿಯಬೇಡಿ. ಅಲ್ಲದೇ, ಅವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಬೇಡಿ ಎಂದು ಬರೆಯಲಾಗಿದೆ.










