ಅಲ್ಬೇನಿಯಾ : ವಿಮಾನ ಅಪಘಾತದಲ್ಲಿ ಭಾರತ ಮೂಲದ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಪುತ್ರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನ್ಯೂಯಾರ್ಕ್ ನಲ್ಲಿ ನಡೆದಿದೆ.
ಭಾರತೀಯ ಮೂಲದ ರೋಮಾ ಗುಪ್ತ (63) ಅಪಘಾತದಲ್ಲಿ ಮೃತಪಟ್ಟ ಮಹಿಳೆ. ಅವರ ಮಗಳು ರೀವಾ ಗುಪ್ತ (33) ಹಾಗೂ 23 ವರ್ಷದ ಪೈಲಟ್ ಮಾರ್ಗದರ್ಶಕ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಾರೆ.
ಲಾಂಗ್ ಐಲ್ಯಾಂಡ್ ನ ರಿಪಬ್ಲಿಕ್ ಏರ್‌ಪೋರ್ಟ್‌ಗೆ ಹಿಂತಿರುಗುತ್ತಿದ್ದ ವೇಳೆ ನಾಲ್ಕು ಆಸನಗಳನ್ನು ಒಳಗೊಂಡಿದ್ದ ಸಿಂಗಲ್ ಇಂಜಿನ್ ಪೈಪರ್ ಚೆರೋಕಿ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡು ರೋಮಾ ಗುಪ್ತ ಸಾವನ್ನಪ್ಪಿದ್ದಾರೆ.
ತೀವ್ರ ಸುಟ್ಟ ಗಾಯಗಳೊಂದಿಗೆ ಗಂಭೀರ ಸ್ಥಿತಿಯಲ್ಲಿರುವ ರೀವಾ ಗುಪ್ತ ಸ್ಟೋನಿ ಬ್ರೂಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೀವಾ ಅವರು ಮೌಂಟ್ ಸಿನಾಯ್ ಸಿಸ್ಟಮ್ ನಲ್ಲಿ ವೈದ್ಯ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಅಪಘಾತದ ಕಾರಣಗಳನ್ನು ತಿಳಿದುಕೊಳ್ಳುವ ಸಲುವಾಗಿ ರಾಷ್ಟ್ರೀಯ ಸುರಕ್ಷತಾ ಮಂಡಳಿಯು ತನಿಖೆ ಮುಂದುವರಿಸಲಿದೆ. ಈ ಕುರಿತು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಕೂಡಾ ತನಿಖೆ ನಡೆಸುತ್ತಿದೆ.










