ವಿಮಾನ ಇಂಧನ ಬೆಲೆ ಶೇ.2ರಷ್ಟು ಹೆಚ್ಚಳ – ಪ್ರಯಾಣ ದರ ಇನ್ನಷ್ಟು ದುಬಾರಿ…

83
firstsuddi

ನವದೆಹಲಿ : ವಿಮಾನಗಳಿಗೆ ಬಳಕೆ ಮಾಡುವ ಜೆಟ್ ಇಂಧನ ಬೆಲೆ ಶೇ.2ರಷ್ಟು ಏರಿಕೆಯಾಗಿರುವ ಕಾರಣ ಇನ್ಮುಂದೆ ವಿಮಾನಯಾನ ಪ್ರಯಾಣ ದರ ಮತ್ತಷ್ಟು ದುಬಾರಿಯಾಗಲಿದೆ.

ಸರ್ಕಾರಿ ಸ್ವಾಮ್ಯದ ಇಂಧನ ರಿಟೈಲ್ ವ್ಯಾಪಾರಿಗಳ ಬೆಲೆ ಅಧಿಸೂಚನೆ ಪ್ರಕಾರ ಏವಿಯೇಷನ್ ಟರ್ಬೈನ್ ಇಂಧನ(ಎಟಿಎಫ್) ಬೆಲೆಯಲ್ಲಿ ಪ್ರತಿ ಕಿಲೋಲೀಟರ್ ಗೆ 1,12,924 ರೂ. ಏರಿಕೆಯಾಗಿದೆ.

ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲೂ ಜೆಟ್ ಇಂಧನ ಬೆಲೆಯಲ್ಲಿ ಏರಿಕೆಯಾಗಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಮ್ಮೆ ಏರಿಕೆಯಾಗಿದೆ. ವಿಶೇಷವೆಂದರೆ ಇಂದು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.