ವಿಳಾಸ ಕೇಳುವ ನೆಪದಲ್ಲಿ ಅಸಭ್ಯ ವರ್ತನೆ ; ಸ್ಕೂಟರ್ ಚರಂಡಿಗೆಸೆದ ಮಹಿಳೆ…

81
firstsuddi

ಗುವಾಹಟಿ (ಅಸ್ಸಾಂ) : ವಿಳಾಸ ಕೇಳುವ ನೆಪದಲ್ಲಿ ಪುಂಡನೊಬ್ಬ ಮಹಿಳೆಯನ್ನು ತಡೆದು ಕಿರುಕುಳ ನೀಡಿದ್ದಾನೆ. ಈ ವೇಳೆ ಮಹಿಳೆ ಆತನ ಸ್ಕೂಟಿಯನ್ನು ಚರಂಡಿಗೆಸೆದು ತಪ್ಪಿಸಿಕೊಳ್ಳದಂತೆ ತಡೆದಿರುವ ಘಟನೆ ನಗರದಲ್ಲಿ ನಡೆದಿದೆ.

ವಿಳಾಸ ಗೊತ್ತಿಲ್ಲ ಎಂದು ಎಷ್ಟು ಬಾರಿ ಹೇಳಿದರೂ ಪದೇ ಪದೇ ಆರೋಪಿ ಪೀಡಿಸುತ್ತಿದ್ದ, ಅಲ್ಲದೇ ನನ್ನ ಜೊತೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ, ಈ ವೇಳೆ ಅರೆಕ್ಷಣ ನನಗೆ ಏನು ಮಾಡಬೇಕು ಎಂದು ತೋಚದೆ ಭಯಭೀತಗೊಂಡೆ. ಆರೋಪಿ ತಕ್ಷಣ ಸ್ಥಳದಿಂದ ಎಸ್ಕೇಪ್ ಆಗಲು ಯತ್ನಿಸಿದ, ಆದರೆ, ನಾನು ಬಿಡಲಿಲ್ಲ. ಆತನ ಸ್ಕೂಟರ್ ಅನ್ನು ಎಳೆದು ಹಿಡಿದೆ. ಅಷ್ಟೊತ್ತಿಗೆ ಸ್ಥಳೀಯರು ನನ್ನ ಸಹಾಯಕ್ಕೆ ಬಂದರು. ಆರೋಪಿ ನನ್ನ ಬಳಿ ಸ್ಕೂಟರ್ ಮೇಲೆತ್ತಿ ಕೊಡುವಂತೆ ಕೇಳಿಕೊಂಡ ಎಂದು ಭಾವನಾ ಕಶ್ಯಪ್ ಎಂಬ ಮಹಿಳೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾಳೆ. ಭಾವನಾ ಕಶ್ಯಪ್ ಈ ವೀಡಿಯೋವನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸದ್ಯ ಆರೋಪಿಯ ವಿರುದ್ಧ ಗುವಾಹಟಿಯ ರುಕ್ಮಿಣಿ ನಗರದ ಡಿಸ್ ಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.