ವಿವಾದಾತ್ಮಕ ಟ್ವೀಟ್ ; ನಿನ್ನೆ ಬಂಧನವಾಗಿದ್ದ ನಟ ಕಮಲ್ ರಶೀದ್ ಖಾನ್ ಆಸ್ಪತ್ರೆಗೆ ದಾಖಲು…

94
firstsuddi

ವಿವಾದಗಳ ಮೂಲಕವೇ ಫೇಮಸ್ ಆಗಿರುವ ಬಾಲಿವುಡ್ ನಟ, ಸ್ವಯಂ ವಿಮರ್ಶಕ ಕಮಲ್ ರಶೀದ್ ಖಾನ್ ಅವರು ನಿನ್ನೆ ಬಂಧನಕ್ಕೊಳಗಾಗಿದ್ದರು. ಇದೀಗ ಇಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಿವಸೇನಾ ಪಕ್ಷದ ಸದಸ್ಯರಾಗಿರುವ ರಾಹುಲ್ ಕನ್ವಾಲ್ ವಿರುದ್ಧ 2020ರಲ್ಲಿ ಕಮಲ್, ಮಾನಹಾನಿ ಆಗುವಂತಹ ಬರಹವನ್ನು ಟ್ವಿಟ್ ಮಾಡಿದ್ದರಂತೆ. ಆಗ ರಾಹುಲ್, ಮುಂಬೈನ ಮಲಾಡ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಕಮಲ್ ಕಳೆದ ಎರಡು ವರ್ಷಗಳಿಂದ ವಿದೇಶದಲ್ಲಿದ್ದ ಕಾರಣ ಅವರನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ. ಆದರೆ ನಿನ್ನೆ ವಿದೇಶದಿಂದ ಮುಂಬೈ ತಲುಪಿದ ಕೂಡಲೇ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲೇ ಮಲಾಡ್ ಪೊಲೀಸರು ಬಂಧಿಸಿದ್ದಾರೆ.

ಕಮಲ್ ಆರ್ ಖಾನ್ ಅವರನ್ನು ನಿನ್ನೆ ಪೊಲೀಸರು ಬಂಧಿಸಿ, ನ್ಯಾಯಾಲಕ್ಕೆ ಹಾಜರು ಪಡಿಸಿದ್ದರು. ಬೊರಿವಲಿ ನ್ಯಾಯಾಲಯವು 14 ದಿನಗಳ ಕಾಲ ಕಮಲ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಜೈಲಿಗೆ ಹೋದ ಕೆಲವೇ ಗಂಟೆಗಳಲ್ಲಿ ಎದೆನೋವಿನ ಕಾರಣಕ್ಕಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗುತ್ತಿದೆ. ಸದ್ಯ ಅವರು ಮುಂಬೈನ ಶತಾಬ್ದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರಂತೆ.