ವಿವಾದಿತ ಪೋಸ್ಟರ್ : ನಿರ್ಮಾಪಕಿ ವಿರುದ್ಧ ದೂರು ದಾಖಲು…

74
firstsuddi

ಖ್ಯಾತ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರು ಸಾಕ್ಷ್ಯಚಿತ್ರ ಪೋಸ್ಟರ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಕಾಳಿ ದೇವತೆ ಸಿಗರೇಟ್ ಸೇದುತ್ತಿರುವ ರೀತಿ ತೋರಿಸಲಾಗಿದೆ. ಆ ಪೋಸ್ಟರ್ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಭಾವನೆಗಳಿಗೆ ಅವರು ಧಕ್ಕೆ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೇ ಅವರ ವಿರುದ್ಧ ದೂರುಗಳು ಕೂಡಾ ದಾಖಲಾಗಿವೆ.

ಲೀನಾ ಅವರು ಕಾಳಿ ಕುರಿತಾಗಿ ಸಾಕ್ಷ್ಯ ಚಿತ್ರ ಮಾಡಿದ್ದು, ಕಾಳಿಯ ಒಂದು ಕೈಲಿ ಸಿಗರೇಟು ಮತ್ತೊಂದು ಕೈಲಿ ಎಲ್ಜಿಬಿಟಿಕ್ಯೂ ಧ್ವಜವನ್ನು ನೀಡಲಾಗಿದೆ. ಇದೀಗ ಟ್ವಿಟರ್ ಬಳಕೆದಾರರು ಈ ಕುರಿತು ಆಕ್ರೋಶ ವ್ಯಕ್ತ ಪಡಿಸಿದ್ದು, ವಿವಾದಿತ ಪೋಸ್ಟರ್ ಅನ್ನು ತಕ್ಷಣ ಅಳಿಸಿ ಹಾಕಬೇಕು. ಅಲ್ಲದೇ ಹಿಂದೂ ಭಾವನೆಗಳ ಜೊತೆ ಆಟವಾಡುವ ಇಂತಹ ನಟಿಯರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಟ್ವೀಟ್ ಮಾಡಲಾಗುತ್ತಿದೆ.