ವಿಶಾಖಪಟ್ಟಣಂ ಆಂಧ್ರಪ್ರದೇಶದ ಹೊಸ ರಾಜಧಾನಿಯಾಗಲಿದೆ : ಜಗನ್ ಮೋಹನ್ ರೆಡ್ಡಿ

55
firstsuddi

ಹೈದರಾಬಾದ್ : ವಿಶಾಖಪಟ್ಟಣಂ ಆಂಧ್ರಪ್ರದೇಶದ ಹೊಸ ರಾಜಧಾನಿಯಾಗಲಿದೆ ಎಂದು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಇಂದು ಘೋಷಣೆ ಮಾಡಿದ್ದಾರೆ.

ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ರಾಜತಾಂತ್ರಿಕ ಒಕ್ಕೂಟದ ಸಭೆಯಲ್ಲಿ ಮಾತನಾಡಿದ ಅವರು, ಅಮರಾವತಿ ಬದಲು ವಿಶಾಖಪಟ್ಟಣಂ ರಾಜಧಾನಿಯಾಗಲಿದೆ ಎಂದರು.

ಮುಂದಿನ ದಿನಗಳಲ್ಲಿ ನಮ್ಮ ರಾಜಧಾನಿಯಾಗಲಿರುವ ವಿಶಾಖಪಟ್ಟಣಂ ನಗರಕ್ಕೆ ನಿಮಗೆಲ್ಲರಿಗೂ ಆಹ್ವಾನ ಕೊಡಲು ಇಲ್ಲಿಗೆ ಬಂದಿದ್ದೇನೆ. ಕೆಲ ತಿಂಗಳುಗಳ ಬಳಿಕ ನಾನೂ ಕೂಡ ವಿಶಾಖಪಟ್ಟಣಂಗೆ ವರ್ಗಾವಣೆ ಆಗುತ್ತೇನೆ. ಮಾರ್ಚ್ 3 ಮತ್ತು 4ರಂದು ವಿಶಾಖಪಟ್ಟಣಂನಲ್ಲಿ ಜಾಗತಿಕ ಹೂಡಿಕೆದಾರರ ಶೃಂಗವನ್ನು ಆಯೋಜಿಸುತ್ತಿದ್ದೇವೆ ಎಂದು ಹೇಳಿದ್ದಾರೆ.