ಅತ್ಯಾಚಾರ ಪ್ರಕರಣದಲ್ಲಿ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ…

50
firstsuddi

ಗಾಂಧಿನಗರ : 2013ರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಗುಜರಾತ್ ನ ಗಾಂಧಿನಗರದ ಸೆಷನ್ಸ್ ಕೋರ್ಟ್ ಈ ಆದೇಶ ನೀಡಿದ್ದು, ಪ್ರಕರಣದ ಸಂತ್ರಸ್ತರಿಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಕೋರ್ಟ್ ಸೂಚಿಸಿದೆ.

2013ರ ಆಗಸ್ಟ್ 15ರ ರಾತ್ರಿ ಜೋಧ್‍ಪುರ್ ಸಮೀಪದ ಮನೈ ಪ್ರದೇಶದಲ್ಲಿ ತಮ್ಮ ಆಶ್ರಮದಲ್ಲಿ ಅಪ್ರಾಪ್ತೆ ಮೇಲೆ ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಅಸಾರಾಂ ಈಗಾಗಲೇ ಜೋಧ್‌ಪುರ ಜೈಲಿನಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಇದೇ 2013ರಲ್ಲಿ ಮಾಜಿ ಮಹಿಳಾ ಶಿಷ್ಯೆಯೊಬ್ಬರು ಅತ್ಯಾಚಾರ ಆರೋಪ ಪ್ರಕರಣ ದಾಖಲಿಸಿದ್ದರು. ಇದೀಗ ಈ ಪ್ರಕರಣದಲ್ಲೂ ಅಸಾರಾಂ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.

ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಡಿ ಕೆ ಸೋನಿ ಅವರು ಶಿಕ್ಷೆಯ ಪ್ರಮಾಣದ ಬಗ್ಗೆ ವಾದ ಆಲಿಸಿದ ನಂತರ ತೀರ್ಪು ಪ್ರಕಟಿಸಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ಅಸಾರಾಂ ಬಾಪು ಅವರನ್ನು ನಿನ್ನೆ ಕೋರ್ಟ್ ದೋಷಿ ಎಂದು ಪ್ರಕಟಿಸಿತ್ತು. ಐಪಿಸಿ ಸೆಕ್ಷನ್ 376 (2)(ಸಿ)(ಅತ್ಯಾಚಾರ), 377 (ಅಸ್ವಾಭಾವಿಕ ಲೈಂಗಿಕತೆ), 342 (ತಪ್ಪಾದ ಬಂಧನ), 506 (2) (ಅಪರಾಧದ ಬೆದರಿಕೆ), 354 (ಮಹಿಳೆಯರ ಅತಿರೇಕದ ಉದ್ದೇಶದಿಂದ ಹಲ್ಲೆ) , ಮತ್ತು 357 (ಒಂದು ಸಂಬಂಧವನ್ನು ತಪ್ಪಾಗಿ ನಿರ್ಬಂಧಿಸಲು ಆಕ್ರಮಣ) ಅಡಿಯಲ್ಲಿ ಆರೋಪ ಸಾಬೀತಾಗಿದ್ದು ಅಸಾರಾಂರನ್ನು ನ್ಯಾಯಾಲಯವು ದೋಷಿ ಎಂದು ತೀರ್ಪ ನೀಡಿತ್ತು.