ವಿಶ್ವನಾಥನ್ ಆನಂದ್ ಜೊತೆ ಕಿಚ್ಚನ ಚೆಸ್ ಆಟ!

102
firstsuddi

ಬೆಂಗಳೂರು : ನಟನೆ, ನಿರ್ದೇಶನ, ಸಿನಿಮಾ ನಿರ್ಮಾಣ, ರಿಯಾಲಿಟಿ ಶೋ ನಿರೂಪಣೆ ಸೇರಿದಂತೆ ಹಲವು ವಿಷಯಗಳಲ್ಲಿ ಕಾಣಿಸಿಕೊಂಡಿರುವ ಕಿಚ್ಚ ಸುದೀಪ್ ಅವರು ಕ್ರಿಕೆಟ್ ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಇದೀಗ ಚೆಸ್ ಆಡಲು ರೆಡಿಯಾಗಿದ್ದು, 5 ಬಾರಿ ವರ್ಲ್ಡ್ ಚಾಂಪಿಯನ್ ಆಗಿರುವ ವಿಶ್ವನಾಥನ್ ಆನಂದ್ ಕಿಚ್ಚ ಸುದೀಪ್ ಸ್ಪರ್ಧೆ ನಡೆಸಲಿದ್ದಾರೆ.

ಕೊರೊನಾ ವಿರುದ್ಧ ಹೋರಾಡಲು ಹಣ ಸಂಗ್ರಹ ಮಾಡುವ ಸಲುವಾಗಿ ವಿಶ್ವನಾಥನ್ ಆನಂದ್ ಜೊತೆಗೆ ಸುದೀಪ್ ಚೆಸ್ ಆಡಲಿದ್ದಾರೆ. ಅದಕ್ಕಾಗಿ ಅಖಾಡ ಸಜ್ಜಾಗಿದೆ.

ಕೋವಿಡ್ ವಿರುದ್ಧ ನಿಧಿ ಸಂಗ್ರಹಿಸಲು ಚೆಸ್ ಕಾಮ್ ಇಂಡಿಯಾ ಸಂಸ್ಥೆಯು ‘ಚೆಕ್ಮೇಟ್ ಕೋವಿಡ್’ ಎಂಬ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮವು ನಾಳೆ (ಜೂನ್ 13) ಮುಂಬೈನಲ್ಲಿ ನಡೆಯಲಿದೆ. ನಾಳೆ ಸಂಜೆ 5 ಗಂಟೆಯಿಂದ 8 ಗಂಟೆಯವರೆಗೂ ಈ ಪಂದ್ಯಾವಳಿ ನಡೆಯಲಿದ್ದು, ಇದರಲ್ಲಿ ಕಿಚ್ಚ ಸುದೀಪ್ ಮಾತ್ರವಲ್ಲದೆ ಬಾಲಿವುಡ್ ನಟ ಆಮೀರ್ ಖಾನ್ ಸೇರಿದಂತೆ ಕೆಲವು ಬಾಲಿವುಡ್ ಸೆಲೆಬ್ರಿಟಿಗಳು ವಿಶ್ವನಾಥನ್ ಆನಂದ್ ಗೆ ಪೈಪೋಟಿ ನೀಡಲಿದ್ದಾರೆ.