ವಿಶ್ವವಿದ್ಯಾಲಯದ ಎಡವಟ್ಟು – ಎಕ್ಸಾಂ ಹಾಲ್ ಟಿಕೆಟ್​ನಲ್ಲಿ ಐಶ್ವರ್ಯಾ ರೈ ಫೋಟೋ…

50
firstsuddi

ರಾಂಚಿ : ವಿಶ್ವವಿದ್ಯಾಲಯದ ಎಡವಟ್ಟಿನಿಂದಾಗಿ ವಿದ್ಯಾರ್ಥಿನಿಯೊಬ್ಬರ ಹಾಲ್ ಟಿಕೆಟ್ ನಲ್ಲಿ ಆಕೆಯ ಚಿತ್ರದ ಬದಲಾಗಿ ನಟಿ ಐಶ್ವರ್ಯಾರ ಫೋಟೋ ಲಗತ್ತಿಸಲಾಗಿದೆ. ಜಾರ್ಖಂಡ್ ನ ಧನ್ ಬಾದ್ ನ ಬಿನೋದ್ ಬಿಹಾರಿ ಮಹ್ತೋ ಕೊಯಲಾಂಚಲ್ ವಿಶ್ವವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ.

ವಿವಿಯಲ್ಲಿ ಅರ್ಥಶಾಸ್ತ್ರ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿ ಮುಂದಿನ ವಾರ ನಡೆಯುವ ಪರೀಕ್ಷೆಗಾಗಿ ಆನ್ ಲೈನ್ ನಲ್ಲಿ ಹಾಲ್ ಟಿಕೆಟ್ ಪ್ರಿಂಟೌಟ್ ಪಡೆದಿದ್ದಾರೆ. ತಮ್ಮ ಚಿತ್ರದ ಜಾಗದಲ್ಲಿ ಐಶ್ವರ್ಯಾ ರೈ ಫೋಟೋ ಕಂಡು ಆಶ್ಚರ್ಯಚಕಿತರಾದ ವಿದ್ಯಾರ್ಥಿನಿ, ಈ ಬಗ್ಗೆ ವಿವಿ ಕುಲಪತಿಗೆ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಂದು ವಿವಿ ಕುಲಪತಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ವಿದ್ಯಾರ್ಥಿನಿ, ಫಾರ್ಮ್ ಭರ್ತಿ ಮಾಡುವಾಗ ಸರಿಯಾಗಿ ಎಲ್ಲಾ ವಿವರವನ್ನು ನೀಡಿದ್ದೆ. ಆದರೆ ಆನ್ ಲೈನ್ ನಲ್ಲಿ ಹಾಲ್ ಟಿಕೆಟ್ ನೋಡುವಾಗ ಐಶ್ವರ್ಯ ರೈ ಫೋಟೋ ಇರುವುದು ನೋಡಿ ಆಶ್ಚರ್ಯವಾಗಿತ್ತು ಎಂದು ಹೇಳಿದರು. ವಿದ್ಯಾರ್ಥಿನಿಗೆ ತೊಂದರೆಯಾಗದಂತೆ ತಾಂತ್ರಿಕ ದೋಷ ಸರಿಪಡಿಸಲಾಗುವುದು ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.