ವಿಷಪೂರಿತ ಅಣಬೆ ತಿಂದು 13 ಮಂದಿ ದಾರುಣ ಸಾವು…

60
firstsuddi

ಗುವಾಹಟಿ : ವಿಷಪೂರಿತ ಕಾಡು ಅಣಬೆಯನ್ನು ತಿಂದ ಪರಿಣಾಮ ಒಂದೇ ವಾರದ ಅಂತರದಲ್ಲಿ 13 ಜನ ಸಾವನ್ನಪ್ಪಿದ ಘಟನೆ ಅಸ್ಸಾಂನಲ್ಲಿ ನಡೆದಿದೆ.

ವಿಷಕಾರಿ ಅಣಬೆಯನ್ನು ಸೇವಿಸಿದ್ದವರು ದಿಬ್ರುಗಢ್ ನಲ್ಲಿರುವ ಅಸ್ಸಾಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದರಲ್ಲಿ 39 ಜನರು ಅಸ್ವಸ್ಥರಾಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ 13 ಜನರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಅಧೀಕ್ಷಕ ಡಾ. ಪ್ರಶಾಂತ್ ದಿಹಿಂಗಿಯಾ ತಿಳಿಸಿದರು.

ಅಸ್ಸೋಂನ ತಿನ್ಸುಕಿಯಾ, ಚರೈಡಿಯೊ,ಶಿವಸಾಗರ್ ಮತ್ತು ದಿಬ್ರುಗಢ ಜಿಲ್ಲೆಯ ಜನರು ಸಾವನ್ನಪ್ಪಿದ್ದು, ಇದರಲ್ಲಿ ಹೆಚ್ಚಿನವರು ಟೀ ಗಾರ್ಡನ್ ಗಳಲ್ಲಿ ಕೆಲಸ ಮಾಡುತ್ತಿದ್ದರು.