ವೀರಗಾಸೆ ಕಲಾವಿದರಿಗೂ ಮಾಸಾಶನ ನೀಡಿ – ರಾಜ್ಯ ಸರ್ಕಾರಕ್ಕೆ ಪುರವಂತರ ಒತ್ತಾಯ…

57
firstsuddi

ಬೆಳಗಾವಿ : ರಾಜ್ಯ ಸರ್ಕಾರ ಉತ್ತರ ಕರ್ನಾಟಕದಲ್ಲಿನ ವೀರಭದ್ರ ಅಥವಾ ವೀರಗಾಸೆ ಕುಣಿತ ಮಾಡುವವರಿಗೂ ಮಾಸಾಶನ ನೀಡುವಂತೆ ಪುರವಂತರು ಒತ್ತಾಯಿಸಿದ್ದಾರೆ.

ಕರಾವಳಿ ಭಾಗದ ದೈವ ನರ್ತಕರಿಗೆ ರಾಜ್ಯ ಸರ್ಕಾರದಿಂದ ಮಾಸಾಶನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪುರವಂತರೊಬ್ಬರು, ಅನಾದಿ ಕಾಲದಿಂದಲೂ ರಥೋತ್ಸವ, ಗುಗ್ಗಳೋತ್ಸವದಲ್ಲಿ ಪುರವಂತರು ಭಾಗಿಯಾಗುತ್ತಾರೆ. ಪುರಾತನ ಕಲೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ವೀರಗಾಸೆ ಮಾಡುವ ಪುರವಂತರಿಗೂ ಮಾಸಾಶನ ನೀಡಬೇಕು ಒತ್ತಾಯಿಸಿದ್ದಾರೆ.

ಗುಗ್ಗಳೋತ್ಸವ, ರಥೋತ್ಸವ ಕಾರ್ಯಕ್ರಮದಲ್ಲಿ ನಾವು ಭಾಗಿಯಾಗುತ್ತೇವೆ. ಇದು ಪುರಾತನ ಕಾಲದಿಂದ ಬಂದ ವೀರಭದ್ರ ದೇವರ ಕಲೆಯಾಗಿದೆ. ಆಯಾ ಊರಿನಲ್ಲಿ ಪುರವಂತರು ಇದ್ದಾರೆ. ಈ ಕಲೆ ನಾಶ ಮಾಡದೇ ಮುಂದುವರಿಸಿದ್ದಾರೆ. ವೀರಗಾಸೆ ಪುರವಂತರ ಕಲೆ ಮೆಚ್ಚಿ ಮಾಸಾಶನ ನೀಡಬೇಕು. ಎಷ್ಟೋ ಜನ 60 ವರ್ಷ ಮೀರಿದ ವೀರಗಾಸೆ ಪುರವಂತರಿದ್ದಾರೆ. ಹೀಗಾಗಿ ಅವರಿಗೂ ಸಹ ಮಾಸಾಶನ ನೀಡಬೇಕೆಂದು ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದು ವೀರಗಾಸೆ ಕಲಾವಿದ ಪಂಚಾಕ್ಷರಿ ಹೇಳಿಕೆ ನೀಡಿದ್ದಾರೆ.

ಮತ್ತೊಂದೆಡೆ ಉತ್ತರ ಕರ್ನಾಟಕದಲ್ಲಿ ವೀರಭದ್ರ ಅಥವಾ ವೀರಗಾಸೆ ಕುಣಿತ ಮಾಡುವವರಿಗೂ ಮಾಸಾಶನ ನೀಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲೂ ಆಗ್ರಹ ಕೇಳಿಬರುತ್ತಿದೆ.