ವೈವಾಹಿಕ ಜೀವನಕ್ಕೆ ಕಾಲಿಟ್ಟ ನಿರೂಪಕಿ ಅನುಶ್ರೀ.

46

ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಉದ್ಯಮಿ ರೋಷನ್ ಅವರ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು, ಅನುಶ್ರೀ ಅವರು ಹೋದಲ್ಲಿ ಬಂದಲ್ಲಿ ನಿಮ್ಮ ಮದುವೆ ಯಾವಾಗ ಎಂಬ ಅಭಿಮಾನಿಗಳ ಪ್ರಶ್ನೆಗೆ ಇಂದು ಫುಲ್ ಸ್ಟಾಪ್ ಇಟ್ಟಿದ್ದಾರೆ.ಕೊಡಗು ಮೂಲದ ರಾಮಮೂರ್ತಿ ಮತ್ತು ಸಿಸಿಲಿಯಾ ಪುತ್ರ ರೋಷನ್ ಅವರನ್ನು ಅನುಶ್ರೀ ಮದುವೆಯಾಗಿದ್ದಾರೆ. ಬೆಂಗಳೂರಿನ ಹೊರ ವಲಯದ ಕಗ್ಗಲೀಪುರ ಬಳಿಯ ರೆಸಾರ್ಟ್‌ವೊಂದರಲ್ಲಿ ವಿವಾಹ ಅದ್ದೂರಿಯಾಗಿ ನೆರವೇರಿದೆ. ಅನುಶ್ರೀ ಅವರು ತಾಳಿ ಕಟ್ಟುವ ವೇಳೆ ಭಾವುಕರಾಗಿದ್ದಾರೆ. ಈ ವೇಳೆ ರೋಷನ್ ಅವರು ಸಮಾಧಾನ ಮಾಡಿದ್ದಾರೆ. ವಿವಾಹ ಸಮಾರಂಭದಲ್ಲಿ ಚಿತ್ರರಂಗದ ಗಣ್ಯರು, ನಟ, ನಟಿಯರು ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದರು.