ಬಾಲಿವುಡ್ ತಾರೆಗಳಾದ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಲವು ವರ್ಷಗಳ ಪ್ರೀತಿಗೆ ಇದೀಗ ಮದುವೆಯೆಂಬ ಮುದ್ರೆ ಒತ್ತಿದ್ದಾರೆ.
ರಾಜಸ್ಥಾನದ ಜೈಸಲ್ಮೇರ್ ನಲ್ಲಿರುವ ಸೂರ್ಯಗಢ ಹೋಟೆಲ್ ನಲ್ಲಿ ಬಹಳ ಅದ್ದೂರಿಯಾಗಿ ವಿವಾಹ ಜರುಗಿದೆ. ಗುರು-ಹಿರಿಯರು, ಆಪ್ತರ ಸಮ್ಮುಖದಲ್ಲಿ ಸಿದ್- ಕಿಯಾರಾ ಜೋಡಿ ಹಸೆಮಣೆ ಏರಿದ್ದಾರೆ. ಮುಂಬೈನಲ್ಲಿ ಈ ಜೋಡಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಆಯೋಜನೆ ಮಾಡಿದೆ.
ಕಿಯಾರಾ ಹಾಗೂ ಸಿದ್ಧಾರ್ಥ್ ಒಂದೇ ರೀತಿಯ ಕ್ಯಾಪ್ಶನ್ ನೀಡಿ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ದಂಪತಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.










