ತಿರುವನಂತಪುರಂ : ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲವು ಇಂದಿನಿಂದ ದರ್ಶನಕ್ಕೆ ಮುಕ್ತವಾಗಲಿದೆ.
ಇಂದಿನಿಂದ ಆರಂಭವಾದ ಮಲಯಾಳಂನ ಶುಭ ತಿಂಗಳ ಚಿಂಗಂನಲ್ಲಿ ಐದು ದಿನಗಳ ಮಾಸಿಕ ಪೂಜೆಗಳು ಮತ್ತು ಆಚರಣೆಗಳಿಗಾಗಿ ತೆರೆಯಲ್ಪಡುತ್ತದೆ. ನಿನ್ನೆ ಸಂಜೆ ತಂತ್ರಿ (ಪ್ರಧಾನ ಅರ್ಚಕ) ಕಂದಾರಿ ರಾಜೀವರು ಅವರ ನೇತೃತ್ವದಲ್ಲಿ ಮೇಲ್ಶಾಂತಿ (ಪ್ರಧಾನ ಅರ್ಚಕ) ಎನ್ ಪರಮೇಶ್ವರನ್ ನಂಬೂತಿರಿ ಅವರು ಗರ್ಭಗುಡಿಯ ಮಹಾದ್ವಾರವನ್ನು ತೆರೆದು ದೀಪ ಬೆಳಗಿಸಿದರು. ನಂತರ ಉಪದೇವತೆಗಳ ಮಹಾದ್ವಾರಗಳನ್ನು ತೆರೆಯಲಾಯಿತು. ಅರ್ಚಕರಿಂದ ದೀಪಗಳನ್ನು ಬೆಳಗಿಸಲಾಯಿತು.
ದೇಗುಲವು ಆಗಸ್ಟ್ 21 ರವರೆಗೆ ತೆರೆದಿರುತ್ತದೆ. ಈ ಹಿನ್ನಲೆಯಲ್ಲಿ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಅಪಾರ ಪ್ರಮಾಣದ ಭಕ್ತರ ಗುಂಪೇ ಹರಿದು ಹರಿದುಬರುತ್ತಿದೆ.
ಭಕ್ತರು ವರ್ಚುಯಲ್ ಕ್ಯೂ ವ್ಯವಸ್ಥೆಯಲ್ಲಿ ಹೆಸರು ನೋಂದಾಯಿಸಿದ ನಂತರ ದೇಗುಲಕ್ಕೆ ಭೇಟಿ ನೀಡಬಹುದು ಎಂದು ದೇವಾಲಯದ ಆಡಳಿತ ಮೂಲಗಳು ತಿಳಿಸಿವೆ.










