ಶಿವಮೊಗ್ಗ : ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ಇಂದು ನಸುಕಿನ ಜಾವ 3.40 ಹಾಗೂ 3.45 ರ ಸುಮಾರಿಗೆ ಭೂಮಿ ಕಂಪಿಸಿದ್ದು, ಭಯ-ಭೀತರಾದ ಜನ ಮನೆಯಿಂದ ಹೊರಗೆ ಓಡಿಬಂದಿದ್ದಾರೆ.
ಭೂಮಿ ಕೇವಲ 3-4 ಸೆಕೆಂಡ್ ಕಂಪಿಸಿದೆ. ಆದರೆ, ಯಾವುದೇ ವಸ್ತುಗಳು ಬಿದ್ದಿಲ್ಲ, ಮನೆಗಳ ಗೋಡೆ ಬಿರುಕು ಬಿಟ್ಟಿಲ್ಲ. ಕಂಪನದ ಅನುಭವ ಶಿರಾಳಕೊಪ್ಪ ಪಟ್ಟಣದ ವ್ಯಾಪ್ತಿಯಲ್ಲಿ ಮಾತ್ರ ನಡೆದಿದೆ. ಪಕ್ಕದ ಗ್ರಾಮಗಳಲ್ಲಿ ಯಾವುದೇ ಕಂಪನದ ಅನುಭವವಾಗಿಲ್ಲ.










