ಶ್ರೀಲಂಕಾದಂತೆ ಭಾರತದಲ್ಲಿಯೂ ಆರ್ಥಿಕ ಬಿಕ್ಕಟ್ಟು ತಲೆದೋರಲಿದೆ : ರಾಹುಲ್ ಗಾಂಧಿ.

53
firstsuddi

ನವದೆಹಲಿ : ಶ್ರೀಲಂಕಾದಂತೆ ಭಾರತದಲ್ಲಿಯೂ ಆರ್ಥಿಕ ಬಿಕ್ಕಟ್ಟು ತಲೆದೋರಲಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಆರ್ ಜೆಡಿ ಮುಖಂಡ ಶರದ್ ಯಾದವ್ ಅವರ ಭೇಟಿ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್ಥಿಕ ತಜ್ಞರು ಮತ್ತು ಅಧಿಕಾರಿಗಳು ಇತರ ರಾಷ್ಟ್ರಗಳನ್ನು ನೋಡಿ ಯೋಜನೆ ರೂಪಿಸುತ್ತಾರೆ. ನಾವು ಅವರಂತೆ ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಮೊದಲು ನಾವು ಯಾರು ಮತ್ತು ಇಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಮನನ ಮಾಡಿಕೊಳ್ಳಬೇಕು ಎಂದಿದ್ದಾರೆ.

ದೇಶವು ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದೆ ಎಂದು ಶರದ್ ಯಾದವ್ ಇಂದು ಹೇಳಿದ್ದನ್ನು ನಾನು ಒಪ್ಪುತ್ತೇನೆ. ದ್ವೇಷವನ್ನು ಹರಡಲಾಗುತ್ತಿದೆ ಮತ್ತು ರಾಷ್ಟ್ರವನ್ನು ವಿಭಜಿಸಲಾಗುತ್ತಿದೆ. ಮುಂದಿನ ಮೂರು-ನಾಲ್ಕು ವರ್ಷಗಳಲ್ಲಿ ಭಯಾನಕ ಫಲಿತಾಂಶ ಬರಲಿದೆ. ದೇಶದ ಆರ್ಥಿಕ ಪರಿಸ್ಥಿತಿ ಮತ್ತು ಉದ್ಯೋಗದ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿರಲ್ಲ. ಕಳೆದ ಎರಡ್ಮೂರು ವರ್ಷಗಳಲ್ಲಿ ಮಾಧ್ಯಮಗಳು, ಸಂಸ್ಥೆಗಳು, ಬಿಜೆಪಿ ಮುಖಂಡರು, ಆರ್‍ಎಸ್‍ಎಸ್ ಸತ್ಯವನ್ನು ಮರೆಮಾಚಿವೆ. ನಿಧಾನವಾಗಿ ಸತ್ಯ ಹೊರಬರಲಿದೆ ಎಂದು ಹೇಳಿದ್ದಾರೆ.