ಸಂಚಾರಿ ವಿಜಯ್ ಅವರ ಮೆದುಳು ನಿಷ್ಕ್ರಿಯಗೊಂಡಿದೆ, ಯಾವುದೇ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ : ಅಪೋಲೋ ವೈದ್ಯ ಡಾ.ಅರುಣ್ ನಾಯ್ಕ್.

94
firstsuddi

ಬೆಂಗಳೂರು : ನಟನ ಆರೋಗ್ಯ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿರುವ ಅಪೊಲೋ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ.ಅರುಣ್ ನಾಯ್ಕ್ ಅವರು, ಸಂಚಾರಿ ವಿಜಯ್ ಅವರಿಗೆ ಚಿಕಿತ್ಸೆ ಶುರುವಾಗಿ 36 ಗಂಟೆಗೆ ಆಗಿದೆ. ಅಪಘಾತ ಆದ ತಕ್ಷಣ ವಿಜಯ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಮರ್ಜೆನ್ಸಿ ವಾರ್ಡ್ ಗೆ ತಂದಾಗ ತುಂಭಾ ಗಂಭೀರ ಸ್ಥಿತಿಯಲ್ಲಿದ್ದರು. ಎ ಸಿಟಿ ಸ್ಕ್ಯಾನ್ ಮಾಡಿದಾಗ ಮೆದುಳಿಗೆ ತೀವ್ರ ಪೆಟ್ಟಾಗಿರುವುದು ಹಾಗೂ ರಕ್ತಸ್ರಾವವಾಗಿರುವುದು ದೃಢಪಟ್ಟಿದೆ. ಹೀಗಾಗಿ ತಕ್ಷಣ ಬ್ರೈನ್ ಸರ್ಜರಿ ಮಾಡಲಾಯಿತು. ಸದ್ಯ ಅವರ ಬ್ರೈನ್ ಫೇಲ್ಯೂರ್ ಆಗಿದೆ. 36 ಗಂಟೆಯಾದ್ರೂ ವಿಜಯ್ ಸ್ಪಂದಿಸ್ತಿಲ್ಲ. ಎಲ್ಲಾ ಚಿಕಿತ್ಸೆ ಕೊಡಲಾಗ್ತಿದೆ. ಉಸಿರಾಟವನ್ನೂ ವಿಜಯ್ ಅವರು ಮಾಡುತ್ತಿಲ್ಲ, ಈಗ ಸಂಪೂರ್ಣ ಐಸಿಯುನಲ್ಲಿ ಲೈಫ್ ಸಪೋರ್ಟ್ ನಲ್ಲಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಖ್ಯಾತ ನಟ ಸಂಚಾರಿ ವಿಜಯ್‍ ಅವರಿಗೆ ಬನ್ನೇರುಘಟ್ಟ ರಸ್ತೆಯ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ನಟ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೋಮಾದಲ್ಲಿದ್ದಾರೆ.