ಸಂವಿಧಾನದ 370ನೇ ವಿಧಿ ರದ್ದು, ಜಮ್ಮು ಕಾಶ್ಮೀರಕ್ಕೆ 8ಸಾವಿರ ಸೈನಿಕರ ರವಾನೆ…

209
firstsuddi

ನವದೆಹಲಿ : ಜಮ್ಮು ಕಾಶ್ಮೀರದಲ್ಲಿ ಆತಂಕದ ಪರಿಸ್ಥಿತಿ ಎದುರಾಗಿದ್ದು, ಕೇಂದ್ರ ಸರ್ಕಾರ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಬಳಿಕ ಭದ್ರತೆ ದೃಷ್ಟಿಯಿಂದಾಗಿ ಕಣಿವೆ ರಾಜ್ಯಕ್ಕೆ 8ಸಾವಿರ ಸೈನಿಕರನ್ನು ನಿಯೋಜಿಸಲಾಗಿದೆ. ಕಾನೂನು ಸುವ್ಯವಸ್ಥೆಗೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಒಡಿಶಾ, ಉತ್ತರ ಪ್ರದೇಶ ಹಾಗೂ ಅಸ್ಸಾಂ ಸೇರಿದಂತೆ ದೇಶದ ವಿವಿಧ ಭಾಗಗಳಿಂದ 8ಸಾವಿರ ಪ್ಯಾರಾ ಮಿಲಿಟರಿ ಸೈನಿಕರನ್ನು ವಿಶೇಷ ವಿಮಾನದ ಮೂಲಕ ಜಮ್ಮು ಕಾಶ್ಮೀರಕ್ಕೆ ರವಾನಿಸಲಾಗಿದೆ.