ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಅಯ್ಯರ್ ಅವರು ಬಾಲಿವುಡ್ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಅವರಿಂದ ಫೋಟೋಶೂಟ್ ಮಾಡಿಸಿದ್ದಾರೆ. ಇತ್ತೀಚೆಗೆ ಅವರು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಈಗ ಹೊಸ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಬಾಲಿವುಡ್ ನಲ್ಲಿ ಪ್ರಾಜೆಕ್ಟ್ ಮಾಡುತ್ತಿರುವುದಾಗಿ ಹೇಳಿಕೊಂಡಿರುವ ಸಾನ್ಯಾ, ಆ ಪ್ರಾಜೆಕ್ಟ್ ಗಾಗಿಯೇ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಾರಿ ಹಂಚಿಕೊಂಡಿರುವ ಫೋಟೋಗಳು ಸಖತ್ ಹಾಟ್ ಅಂಡ್ ಬೋಲ್ಡ್ ಆಗಿವೆ.
ಸಾನ್ಯಾ ಫೋಟೋಗಳನ್ನು ನೋಡಿದ ಜನ ಮೆಚ್ಚಿಕೊಂಡಿದ್ದಾರೆ. ಫೈರ್, ಹಾಟ್ ಕ್ವೀನ್, ಸೂಪರ್, ನಮ್ಮ ಕನ್ನಡದ ತಮನ್ನಾ ಎಂದೆಲ್ಲಾ ಬಗೆ ಬಗೆಯ ಕಾಮೆಂಟ್ ಗಳನ್ನು ಹಾಕಿದ್ದಾರೆ.










