ಸಣ್ಣ ಕೈಗಾರಿಕಾ ಉದ್ಯಮಗಳಿಗೆ ಆರ್‌ಬಿಐನಿಂದ 50 ಸಾವಿರ ಕೋಟಿ ರೂ ನೆರವು…

223
firstsuddi

ನವದೆಹಲಿ : ಮಹಾಮಾರಿ ಕೊರೊನಾ ವೈರಸ್ ಭೀತಿಯಿಂದ ದೇಶಾದ್ಯಂತ ಲಾಕ್‍ಡೌನ್ ಆಗಿರುವ ಹಿನ್ನೆಲೆ, ಸಣ್ಣ ಕೈಗಾರಿಕಾ ಉದ್ಯಮಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ 50 ಸಾವಿರ ಕೋಟಿ ರೂ ನೆರವು ಘೋಷಣೆ ಮಾಡಿದೆ. ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು, ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಭೀತಿಯಿಂದ ದೇಶದ ಮೇಲೆ ಆರ್ಥಿಕವಾಗಿ ಬಹಳ ಪರಿಣಾಮ ಬೀರಿದೆ. ಕೈಗಾರಿಕೆ ಮೇಲೆ ಕೊರೊನಾ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರಿದೆ. ಹೀಗಾಗಿ ಸಣ್ಣ ಕೈಗಾರಿಕಾ ಉದ್ಯಮಗಳಿಗೆ ಆರ್‌ಬಿಐ ವತಿಯಿಂದ 50 ಸಾವಿರ ಕೋಟಿ ರೂ ನೆರವು ನೀಡಲಾಗಿದ್ದು, ನಬಾರ್ಡ್ ಗೆ 25 ಸಾವಿರ ಕೋಟಿ, ಭಾರತೀಯ ಸಣ್ಣ ಉದ್ದಿಮೆಗಳ ಅಭಿವೃದ್ಧಿ ಬ್ಯಾಂಕ್ ಗೆ 15 ಸಾವಿರ ಕೋಟಿ ಹಾಗೂ ರಾಷ್ಟ್ರೀಯ ಗೃಹ ಬ್ಯಾಂಕ್ ಗೆ 10 ಸಾವಿರ ಕೋಟಿ ನೆರವು ನೀಡಲಾಗಿದೆ ಎಂದರು.
ಅಷ್ಟೇ ಅಲ್ಲದೇ ದೇಶದಲ್ಲಿ ಹಣ ಚಲಾವಣೆಯನ್ನು ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಸಾಲ ಪಡೆಯುವ ಮಿತಿಯನ್ನು ಶೆ.60ಕ್ಕೆ ಹೆಚ್ಚಿಸಿದ್ದು, ಕಂಪನಿಗಳ ಸಾಲ ಪಾವತಿಗೆ 3 ತಿಂಗಳು ವಿನಾಯಿತಿ ನೀಡಿದೆ. ಹಾಗೂ ರಿಯಲ್ ಎಸ್ಟೇಟ್ ಕಂಪನಿಗಳಿಗೆ ನೀಡಲಾಗಿರುವ ಸಾಲದ ಅವಧಿಯನ್ನು ಒಂದು ವರ್ಷದವರೆಗೆ ವಿಸ್ತರಣೆ ಮಾಡಿದೆ. ರಿಸರ್ವ್ ರೆಪೋ ದರವನ್ನು ಶೇ.25 ರಷ್ಟು ಕಡಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ