ಸಮವಸ್ತ್ರ ಕಡ್ಡಾಯ ಅಂತ ಸರ್ಕಾರ ಎಲ್ಲೂ ಹೇಳಿಲ್ಲ : ಸಿದ್ದರಾಮಯ್ಯ.

60
firstsuddi

ಬೆಂಗಳೂರು : ಉಡುಪಿ ಸರ್ಕಾರಿ ಪಿಯು ಕಾಲೇಜಿನ ಹಿಜಾಬ್ ವಿವಾದದ ಬಗ್ಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸಮವಸ್ತ್ರ ಕಡ್ಡಾಯ ಅಂತ ಸರ್ಕಾರ ಎಲ್ಲೂ ಹೇಳಿಲ್ಲ. ಹಿಜಬ್ ಹಾಕುವುದು ಮೂಲಭೂತ ಹಕ್ಕು. ಸಾಕಷ್ಟು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈಗ ಅದು ನ್ಯಾಯಾಲಯದಲ್ಲಿದೆ, ಏನಾಗುತ್ತೆ ನೋಡೋಣ ಎಂದು ತಿಳಿಸಿದರು.

ಪ್ರಾಂಶುಪಾಲರು ಗೇಟ್ ಬಂದ್ ಮಾಡಿದ್ದು, ಸಂವಿಧಾನ ವಿರೋಧ. ಇದು ಮುಸ್ಲಿಂ ಹೆಣ್ಣುಮಕ್ಕಳ ವಿದ್ಯಾಭ್ಯಾಸವನ್ನು ತಡೆಯುವ ಪ್ರಯತ್ನ. ಹಿಜಾಬ್ ವಿವಾದವನ್ನು ಬಿಜೆಪಿಗರು ದೊಡ್ಡದು ಮಾಡಿಸ್ತಿದ್ದಾರೆ. ಕರಾವಳಿಯು ಸಂಘ ಪರಿವಾರದ ಕೋಮುವಾದದ ಪ್ರಯೋಗಾಲಯವಾಗಿದೆ ಎಂದು ವಾಗ್ದಾಳಿ ನಡೆಸಿದರು.

ನದಿ ಜೋಡಣೆ ಸಂಬಂಧ ಮಾತನಾಡಿ, ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಬಜೆಟ್ ನಲ್ಲಿ ದಕ್ಷಿಣದ ನದಿಗಳನ್ನು 46 ಸಾವಿರ ಕೋಟಿ ವೆಚ್ಚದಲ್ಲಿ ಜೋಡಣೆ ಮಾಡುತ್ತೇವೆ ಎಂದಿದ್ದಾರೆ. ಇದು ಕಾರ್ಯಸಾಧುವಾದ ಯೋಜನೆ ಅಲ್ಲ. ಸಚಿವೆ ನಿರ್ಮಲಾ ಸೀತಾರಾಮನ್ ತಮಿಳುನಾಡಿನವರು. ಅದಕ್ಕಾಗಿ ತಮಿಳುನಾಡಿಗೆ ಈ ಯೋಜನೆ ಕೊಟ್ಟಿದ್ದಾರೆ. ನ್ಯಾಷನಲ್ ವಾಟರ್ ಡೆವಲಪ್ ಮೆಂಟ್ ಏಜನ್ಸಿಯಲ್ಲಿ ಒಂದು ಸಭೆ ನಡೆದಿದೆ. ಅಲ್ಲಿ ಬಹುಷಃ ನದಿ ಜೋಡಣೆ ಬಗ್ಗೆ ಚರ್ಚೆಯಾಗಿದೆ. 347 ಟಿಎಂಸಿ ನೀರನ್ನು ಬಳಸಿಕೊಳ್ಳಬೇಕು ಎಂದು ಚರ್ಚೆಯಾಗಿದೆ ಎಂದರು.

ದೇಶದಲ್ಲಿ ರಾಜಸ್ತಾನ ರಾಜ್ಯದ ಬಳಿಕ ಹೆಚ್ಚು ಒಣ ಭೂಮಿ ಹೊಂದಿರುವ ರಾಜ್ಯ ಕರ್ನಾಟಕ. ಶೇ 70 ರಷ್ಟು ಒಣ ಭೂಮಿ ನಮ್ಮ ರಾಜ್ಯದಲ್ಲಿದೆ. ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ ಶೇ. 50 ಕ್ಕಿಂತ ಹೆಚ್ವು ನೀರಾವರಿಯಾಗಿದೆ. ಕರ್ನಾಟಕದಲ್ಲಿ ಕೇವಲ ಶೇ 30 ರಷ್ಟು ಮಾತ್ರ ನೀರಾವರಿಯಾಗಿದೆ. ನದಿ ಜೋಡಣೆಯಿಂದ ಹೆಚ್ಚು ನೀರು ಸಿಗಲ್ಲ. ಯಾವ ಯಾವ ನದಿಗಳಿಂದ ಹೆಚ್ಚು ನೀರು ಸಿಗುತ್ತದೆ ಎಂದು ರಾಜ್ಯದವರ ಜೊತೆಗೆ ಚರ್ಚೆ ಮಾಡಿಲ್ಲ. ಇದರಿಂದ ಜಲವಿವಾದ ಶುರುವಾಗುತ್ತದೆ. ಹಾಗಾಗಿ ದಕ್ಷಿಣ ಭಾರತದ ರಾಜ್ಯಗಳ ಜೊತೆ ಸಭೆ ಕರಿಯಬೇಕು. ಸರ್ವ ಪಕ್ಷ ಸಭೆ ಕರೆಯಬೇಕು ಎಂದು ಹೇಳಿದರು.