ಸರ್ಕಾರದ ಆದೇಶ ಪ್ರತಿಯಲ್ಲಿ ತಪ್ಪಾಗಿ ಕನ್ನಡ ಪದ ಬಳಕೆ – ಸಾರ್ವಜನಿಕ ವಲಯಯಲ್ಲಿ ಆಕ್ರೋಶ…

71
firstsuddi

ಬೆಂಗಳೂರು : ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋ ಚಿತ್ರೀಕರಣ ನಿಷೇಧ ಆದೇಶವನ್ನು ರಾಜ್ಯ ಸರ್ಕಾರ ತಡರಾತ್ರಿ ಹಿಂಪಡೆದಿದೆ. ಆದರೆ ಈ ಆದೇಶ ಪ್ರತಿಯಲ್ಲಿ ಕನ್ನಡ ಪದ ತಪ್ಪಾಗಿ ಬಳಕೆ ಮಾಡಿರುವುದಕ್ಕೆ ಸಾರ್ವಜನಿಕ ವಲಯಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಎಂಬ ಪದ ಬಳಕೆ ಬದಲು ‘ಕರ್ನಾಟಾ’ ರಾಜ್ಯಪಾಲರ ಆಜ್ಞಾನುಸಾರ ಎಂದು, ಪ್ರಸ್ತಾವನೆ ಬದಲು ‘ಪ್ರಸತ್ತಾವನೆ’ ಎಂದು ಆಗಿದ್ದು, ಸರ್ಕಾರದ ಹಿರಿಯ ಅಧಿಕಾರಿಗಳ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.