ಸವಿತಾ ಸಮಾಜದ ಬಂದುಗಳು ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ : ಮೋಹನ್ ಬಂಡಾರಿ.

97
firstsuddi

ಕಳಸ : ಸವಿತಾ ಸಮಾಜದ ಬಂದುಗಳು ತಮ್ಮ ವೃತ್ತಿಯಲ್ಲಿ ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದು ಸವಿತಾ ಭಂಡಾರಿ ಸಮಾಜ ಕಳಸ ಇದರ ಅಧ್ಯಕ್ಷ ಮೋಹನ್ ಬಂಡಾರಿ ಹೇಳಿದರು.

ನಿನ್ನೆ ಕಳಸದಲ್ಲಿ ವಿಶ್ವ ಕ್ಷೌರಿಕ ದಿನಾಚರಣೆಯನ್ನು ಸರಳವಾಗಿ ಆಚರಿಸಿ ಮಾತನಾಡಿದ ಅವರು ಸಂಕಷ್ಟದ ನಡುವೆಯೂ ಸಮಾಜದ ಬಂದುಗಳು ವೃತ್ತಿ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದಾರೆ. ನಮ್ಮ ಸಮಾಜದ ಬಂದುಗಳು ಶಿಕ್ಷಣ,ಕ್ರೀಡೆ,ರಾಜಕೀಯ,ಆರ್ಥಿಕವಾಗಿಯೂ ಸದೃಡವಾಗಿ ಬಲವಾಗಬೇಕು. ಇದಕ್ಕಾಗಿ ನಮ್ಮ ಸಂಘಟಣೆಯನ್ನು ಹೆಚ್ಚಾಗಿ ಬಲ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಳಸ ಸವಿತಾ ಸಮಾಜ ಸಂಘದ ಗೌರವಾಧ್ಯಕ್ಷ ಕೃಷ್ಣ ಭಂಡಾರಿ ಹಾಗೂ ಎಲ್ಲಾ ಸರ್ವ ಸದಸ್ಯರು ಇದ್ದರು.