ಸಾಕ್ಷ್ಯ ನಾಶಕ್ಕೆ ಶ್ರದ್ಧಾಳ ತಲೆ ಬುರುಡೆ ಸುಟ್ಟು ಹಾಕಿದ್ದ ಅಫ್ತಾಬ್!

71
firstsuddi

ನವದೆಹಲಿ : ಶ್ರದ್ಧಾ ವಾಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇ ದಿನೇ ಭಯಾನಕ ವಿಷಯಗಳು ಹೊರಬರುತ್ತಿವೆ. ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದ ಆರೋಪಿ ಅಫ್ತಾಬ್ ನಿತ್ಯ 2 ತುಂಡುಗಳನ್ನು ಎಸೆದು ಬರುತ್ತಿದ್ದ. ಕೊನೆಯವರೆಗೂ ತಲೆ ಬುರುಡೆ ಉಳಿಸಿಕೊಂಡಿದ್ದ ಅಫ್ತಾಬ್ ಅದರ ಗುರುತು ಸಿಗದಂತೆ ಸುಟ್ಟು ಎಸೆದಿದ್ದ ಎಂದು ತಿಳಿದುಬಂದಿದೆ.

ಭೌತಿಕ ಸಾಕ್ಷ್ಯಗಳ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ತಲೆ ಬುರುಡೆ ಮತ್ತು ತುಂಡರಿಸಿದ ಕೈ ಸಿಕ್ಕಿದ್ದು, ತಲೆ ಸುಟ್ಟ ಸ್ಥಿತಿಯಲ್ಲಿತ್ತು ಎಂದು ತಿಳಿದು ಬಂದಿದೆ.

ಸಾಕ್ಷಿ ಮತ್ತು ಮುಖದ ಗುರುತು ಅಳಿಸುವ ಬಗ್ಗೆ ಗೂಗಲ್‌ನಿಂದ ಮಾಹಿತಿ ಹುಡುಕಿ, ಅದರಂತೆ ತಲೆ ಸುಟ್ಟ ಹಾಕಿ, ಬಳಿಕ ಅದನ್ನು ಕೈ ಭಾಗದೊಂದಿಗೆ ಎಸೆದು ಬಂದಿರುವುದಾಗಿ ಅಫ್ತಾಬ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪೂರ್ವ ದೆಹಲಿ ಭಾಗದಲ್ಲಿ ತುಂಡರಿಸಿ ಕೈ ಮೂಳೆಗಳು ಮತ್ತು ತಲೆ ಭಾಗ ಪತ್ತೆಯಾಗಿದ್ದು, ಇವುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಡಿಎನ್ ಎ ಪರೀಕ್ಷೆಗೆ ಕಳುಹಿಸಿದ್ದಾರೆ. ಏಮ್ಸ್ ಆಸ್ಪತ್ರೆಯಲ್ಲಿ ಡಿಎನ್ ಎ ಪರೀಕ್ಷೆ ನಡೆಯಲಿದ್ದು, ಇದಕ್ಕಾಗಿ ಈಗಾಗಲೇ ಶ್ರದ್ಧಾ ತಂದೆ ವಿಕಾಸ್ ವಾಕರ್ ಡಿಎನ್ ಎ ಸ್ಯಾಂಪಲ್ಸ್ ಪಡೆಯಲಾಗಿದೆ.