ಸಾರ್ವಜನಿಕ ಸಭೆಯಲ್ಲೇ ಬಿಜೆಪಿ ಶಾಸಕನಿಗೆ ಕಪಾಳಮೋಕ್ಷ ಮಾಡಿದ ರೈತ.

79
firstsuddi

ಉನ್ನಾವೋ : ಉತ್ತರ ಪ್ರದೇಶದ ಸದರ್ ಕ್ಷೇತ್ರದ ಬಿಜೆಪಿ ಶಾಸಕ ಪಂಕಜ್ ಗುಪ್ತಗೆ ರೈತನೋರ್ವ ಸಾರ್ವಜನಿಕ ಸಭೆಯಲ್ಲೇ ಕಪಾಳಮೋಕ್ಷ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದ ಪಂಕಜ್ ಗುಪ್ತ ಅವರು ವೇದಿಕೆ ಮೇಲೆ ಕುಳಿತಿದ್ದ ವೇಳೆ ಅಲ್ಲಿಗೆ ಬಂದಿರುವ ವೃದ್ಧ ರೈತನೋರ್ವ ಕೆನ್ನೆಗೆ ಹೊಡೆದಿದ್ದಾನೆ. ವಿಡಿಯೋದಲ್ಲಿರುವ ರೈತನನ್ನು ಛತ್ರಪಾಲ್ ಎಂದು ಗುರುತಿಸಲಾಗಿದ್ದು, ಕಳೆದ ಮೂರು ದಿನಗಳ ಹಿಂದೆ ನಡೆದ ಘಟನೆಯ ವಿಡಿಯೋ ಇದಾಗಿದೆ ಎನ್ನಲಾಗುತ್ತಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಶಾಸಕ ಪಂಕಜ್ ಗುಪ್ತ, ಆ ವ್ಯಕ್ತಿ ನನ್ನ ‘ಚಾಚಾ’ ರೀತಿ ಪ್ರೀತಿಯಿಂದ ಕೆನ್ನೆ ತಟ್ಟಿದ್ದಾರೆ ಎಂದು ಹೇಳಿದ್ದಾರೆ.