ಬೆಂಗಳೂರು : 2021-22ನೇ ಸಾಲಿನ ಸಿಇಟಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಿದ್ದು, ಈ ಬಾರಿಯ ಸಿಇಟಿಯಲ್ಲಿ ಬಾಲಕಿಯರನ್ನು ಹಿಂದಿಕ್ಕಿ ಬಾಲಕರು ಮೇಲುಗೈ ಸಾಧಿಸಿದ್ದಾರೆ. ಮಲ್ಲೇಶ್ವರಂ ಬಳಿ ಇರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು.
ಒಟ್ಟು 83 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, 88 ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರು ಈ ಬಾರಿ ಸಿಇಟಿ ಫಲಿತಾಂಶದಲ್ಲಿ ತೇರ್ಗಡೆ ಹೊಂದಿದ್ದಾರೆ. ಇಂಜಿನಿಯರಿಂಗ್ ಕೋರ್ಸ್ ಗೆ 1,71,656 ರ‍್ಯಾಂಕ್, ಕೃಷಿ ಕೋರ್ಸ್ ಗೆ 1,39,968 ರ‍್ಯಾಂಕ್, ಪಶುಸಂಗೋಪನೆ 1,42,2820 ಯೋಗ ಮತ್ತು ನ್ಯಾಚುರೋಪತಿ 1,42,750 ರ‍್ಯಾಂಕ್, ಬಿ.ಫಾರ್ಮ್ ಕೋರ್ಸ್ ಮತ್ತು ಫಾರ್ಮ-ಡಿ ಕೋರ್ಸಿಗೆ 1,74,568 ರ‍್ಯಾಂಕ್ ಬಂದಿದೆ.
Kea.kar.nic.in ಮತ್ತು karesults.nic.in ವೆಬ್ಸೈಟ್ ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಸೆಪ್ಟೆಂಬರ್ 1 ರಿಂದ ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ಆರಂಭವಾಗಲಿದೆ.
ರ‍್ಯಾಂಕ್ ಪಡೆದವರ ವಿವರ ಇಂತಿದೆ:
ಇಂಜಿನಿಯರಿಂಗ್ ಕೋರ್ಸ್
ಪ್ರಥಮ ರ‍್ಯಾಂಕ್(97%) – ಅಪೂರ್ವ ಟಂಡನ್, ಯಲಹಂಕ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಬೆಂಗಳೂರು.
ದ್ವಿತೀಯ ರ‍್ಯಾಂಕ್(96%) – ಸಿದ್ದಾರ್ಥ ಸಿಂಗ್, ಮಾರತ್ತಹಳ್ಳಿ ಶ್ರೀ ಚೈತನ್ಯ ಟೆಕ್ನೊ ಸ್ಕೂಲ್ ಬೆಂಗಳೂರು
ತೃತಿಯ ರ‍್ಯಾಂಕ್ – ಆತ್ಮುಕರಿ ವೆಂಕಟ ಮಾಧವನ್ ,ಮಾರತ್ತಹಳ್ಳಿ ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ ಬೆಂಗಳೂರು
ಯೋಗ ಮತ್ತು ನ್ಯಾಚುರೋಪತಿ
ಪ್ರಥಮ ರ‍್ಯಾಂಕ್(98%) – ಹೃಷಿಕೇಶ್, ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್, ಬೆಂಗಳೂರು
ದ್ವಿತೀಯ ರ‍್ಯಾಂಕ್(96%) – ವ್ರಜೇಶ್, ಮಾದವ ಕೃಪ ಇಂಗ್ಲೀಷ್ ಸ್ಕೂಲ್ ಉಡುಪಿ
ತೃತೀಯ ರ‍್ಯಾಂಕ್(96%) – ಕೃಷ್ಣ, ಶ್ರೀ ಚೈತನ್ಯ ಟೆಕ್ನೊ ಸ್ಕೂಲ್ ಬೆಂಗಳೂರು
ಕೃಷಿ
ಪ್ರಥಮ ರ‍್ಯಾಂಕ್(93%) -ಅರ್ಜುನ್ ರವಿಶಂಕರ್, ಎಚ್ಎಲ್ ಪಬ್ಲಿಕ್ ಸ್ಕೂಲ್, ಬೆಂಗಳೂರು
ದ್ವಿತೀಯ ರ‍್ಯಾಂಕ್(92%) -ಸುಮಿತ್ ಎಸ್ ಪಾಟೀಲ್, ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಉಲ್ಲಾಳ ಮುಖ್ಯ ರಸ್ತೆ, ಬೆಂಗಳೂರು
ತೃತೀಯ ರ‍್ಯಾಂಕ್(92%) -ಸುದೀಪ್ ವೈ ಎಂ, ವಿದ್ಯಾನಿಕೇತನ ಪಿಯು ಕಾಲೇಜ್, ತುಮಕೂರು
ಪಶು ವೈದ್ಯಕೀಯ ವಿಜ್ಞಾನ
ಪ್ರಥಮ ರ‍್ಯಾಂಕ್(98%) – ಹೃಷಿಕೇಶ್ ನಾಗಭೂಷಣ ,ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್ ಬೆಂಗಳೂರು
ದ್ವಿತೀಯ ರ‍್ಯಾಂಕ್(97%) – ಮನೀಶ್ ಎಸ್ ಎ, ಚೈತನ್ಯ ಟೆಕ್ನೋ ಸ್ಕೂಲ್ ಕೆ ಆರ್ ಪುರ ಬೆಂಗಳೂರು
ತೃತೀಯ ರ‍್ಯಾಂಕ್(96%) – ಶುಭಾ ಕೌಶಿಕ್, ಚೈತನ್ಯ ಟೆಕ್ನೋ ಸ್ಕೂಲ್ ಬೆಂಗಳೂರು










