ಸಿದ್ದರಾಮಯ್ಯನಂತಹ ದ್ರೋಹಿಯನ್ನು ಹಿಂದೆ ನೋಡಿಲ್ಲ, ಮುಂದೆಯೂ ನೋಡಲ್ಲ : ಈಶ್ವರಪ್ಪ.

62
firstsuddi

ಬಾಗಲಕೋಟೆ : ಕರ್ನಾಟಕ ರಾಜಕಾರಣದಲ್ಲಿ ಸಿದ್ದರಾಮಯ್ಯನಂತಹ ದ್ರೋಹಿಯನ್ನು ಹಿಂದೆ ನೋಡಿಲ್ಲ, ಮುಂದೆಯೂ ನೋಡಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.

ನಗರದಲ್ಲಿ ಬಿಜೆಪಿ ಪಕ್ಷದ ಕಚೇರಿ ಉದ್ಘಾಟನೆಗೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಸವರಾಜ್ ಬೊಮ್ಮಾಯಿ ವೀಕ್ ಲೀಡರ್ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ನೀಡಿದರು. ಸಿದ್ದರಾಮಯ್ಯ ವೀಕ್ ಲೀಡರ್ ಆಗಿದ್ದಕ್ಕೆ ಸೋತಿದ್ದು. ಸ್ಟ್ರಾಂಗ್ ಸಿಎಂ ಆಗಿದ್ದರೆ ಯಾಕೆ ಸೋಲುತ್ತಿದ್ದರು? ಯಾವಾಗಲೂ ನೀನು ವೀಕ್ ಅಂತ ಹೇಳುವವರು ಯಾರು? ಯಾರೂ ತಾನು ವೀಕ್ ಇರುತ್ತಾರೋ ಅವರೇ ಎಂದರು.

ನಿಮ್ಮ ಅಪ್ಪ ಅಮ್ಮ ಯಾರೂ ಅಂತಲೇ ನೀವು ಹೇಳುತ್ತಿಲ್ಲ. ಒಂದು ಸಾರಿ ಬಾದಾಮಿ, ಒಂದು ಸಾರಿ ಕೊಪ್ಪಳ, ಇನ್ನೊಂದು ಸಾರಿ ಕೋಲಾರ, ಈಗ ವರುಣಾ ಅಂತಿದ್ದೀರಾ. ನಿಮ್ಮ ಕ್ಷೇತ್ರವೇ ಗೊತ್ತಿಲ್ಲ. ಬಿಜೆಪಿಯಲ್ಲಿ ಅಭಿವೃದ್ಧಿ ನೋಡಿ ನೀವೇ ನಿಲ್ಲಿ ಎನ್ನುವ ಪರಿಸ್ಥಿತಿ ಇದೆ. ಕ್ಯಾಪ್ಟನ್ ಗೆ ಪ್ಲೇಸ್ ಇಲ್ಲ, ಇನ್ನೂ ಪಾಪ ಫಾಲೋವರ್ಸ್ ಗತಿಯೇನು ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಆಡುವ ಆಟ ಬಿಜೆಪಿಯಲ್ಲಿ ನಡೆಯಲ್ಲ. ರಾಜ್ಯದ ಜನರ ಮೇಲೂ ನಡೆಯಲ್ಲ, ಕಾಂಗ್ರೆಸ್ ನಲ್ಲಿ ಮಾತ್ರ ನಡೆಯುತ್ತದೆ. ಬಿಜೆಪಿ, ಕೆಜೆಪಿ ಒಡೆದು ಸಿದ್ದರಾಮಯ್ಯ ಸಿಎಂ ಆದರು. ಈಗ ಬಿಜೆಪಿ ಒಡೆಯಲು ಆಗುತ್ತಿಲ್ಲ. ಹೀಗಾಗಿ ಬೊಮ್ಮಾಯಿ ನಾಯಕತ್ವ ಸರಿಯಿಲ್ಲ ಅಂತಿದ್ದಾರೆ ಎಂದು ಕಿಡಿಕಾರಿದರು.