ಸಿದ್ದರಾಮಯ್ಯ ಮತ್ತು ಸತ್ಯ ಎಣ್ಣೆ-ಸೀಗೆಕಾಯಿ ಇದ್ದಂತೆ : ಸಿ.ಟಿ.ರವಿ.

88
firstsuddi

ಚಿಕ್ಕಮಗಳೂರು : ಮೋದಿ ಪ್ರವಾಹದ ವೇಳೆ ಬರಲಿಲ್ಲ, ಆಕ್ಸಿಜನ್ ಕೊಡಲಿಲ್ಲ, ಈಗ ಯೋಗಕ್ಕೆ ಬಂದಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದ್ದರು. ಈ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಅವರು ನಗರದಲ್ಲಿಂದು ಮಾಧ್ಯದವರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಮತ್ತು ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು. ಸತ್ಯ ಮತ್ತು ಸಿದ್ದರಾಮಯ್ಯ ಎಣ್ಣೆ-ಸೀಗೆಕಾಯಿ ಇದ್ದಂತೆ. ಸುಳ್ಳು ಹೇಳುವುದರಲ್ಲಿ ಅವರಂತಹ ನಿಷ್ಟಾವಂತರು ಬೇರೆ ಯಾರೂ ಇಲ್ಲ. ಸುಳ್ಳಿಗೆ ಪ್ರಶಸ್ತಿ ನೀಡುವುದಾದರೆ ಸಿದ್ದರಾಮಯ್ಯ ಬಿಟ್ಟು ಬೇರೆ ಯಾರಿಗೂ ಸಿಗಲ್ಲ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿದ್ರು. ತಮ್ಮ ಅಧಿಕಾರವಧಿಯಲ್ಲಿ ಆಕ್ಸಿಜನ್ ಪ್ಲಾಂಟ್ ಹಾಕಿದ್ರಾ ಎಂದು ಸಿ.ಟಿ.ರವಿ ಪ್ರಶ್ನೆ ಮಾಡಿದರು. ಪಿ ಎಂ ಕೇರ್ಸ್ ನಲ್ಲಿ ಪ್ರತಿ ಆಸ್ಪತ್ರೆಗೂ ಆಕ್ಸಿಜನ್ ಪ್ಲಾಂಟ್ ಹಾಕಲಾಗಿದೆ. ತ್ವರಿತ ನಿರ್ಧಾರ ಕೈಗೊಂಡಿರುವ ಪರಿಣಾಮವಾಗಿ ಸಾವಿನ ಪ್ರಮಾಣ ಕಡಿಮೆಯಾಗಿದ್ದು, ಇಲ್ಲದಿದ್ದರೆ 10ಪಟ್ಟು ಹೆಚ್ಚಿರುತಿತ್ತು. 9 ತಿಂಗಳಲ್ಲಿ ಎಲ್ಲರಿಗೂ ಎರಡು ಡೋಸ್ ಹಾಕಲಾಗಿದೆ. ಸಿದ್ದರಾಮಯ್ಯನವರು ಕೊರೊನಾ ಲಸಿಕೆ ಹಾಕಿಸಿಕೊಂಡಿಲ್ವಾ? ಲಸಿಕೆ ಸಿಗದಿದ್ದರೆ ಸಿದ್ದರಾಮಯ್ಯ ಅವರಿಗೆ ಇಂದು ಏನಾಗಿರುತಿತ್ತು ಎಂದು ಅವರೇ ಊಹೆ ಮಾಡಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ.