ಬೆಂಗಳೂರು : ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಎಡಿಜಿಪಿ ಕೆಎಸ್‍ಆರ್‍ಪಿ ಅಲೋಕ್ ಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು, ಫೋನ್ ಕದ್ದಾಲಿಕೆ ಆರೋಪ ಪ್ರಕರಣದಲ್ಲಿ. ಈ ಪ್ರಕರಣದಲ್ಲಿ ಯಾರು ಯಾರನ್ನಾದರೂ ತನಿಖೆ ನಡೆಸಲಿ. ಯಾರ್ಯಾರ ಅವಧಿಯಲ್ಲಿ ಫೋನ್ ಕದ್ದಾಲಿಕೆ ಆಗಿದೆಯೋ ಅದನ್ನೆಲ್ಲ ತನಿಖೆ ಮಾಡಲಿ. ಈ ದೇಶದ ಕಾನೂನು ವ್ಯವಸ್ಥೆಯಲ್ಲಿ ಯಾರು ಯಾರನ್ನು ಬೇಕಾದರೂ ತನಿಖೆ ಮಾಡಬಹುದು. ಹಿರಿಯ ಅಧಿಕಾರಿ ಅಲೋಕ್ ಕುಮಾರ್ ಅವರು ಈಗಲೂ ದಕ್ಷ ಅಧಿಕಾರಿ ಎಂದು ಹೇಳಿದರು.










