ಸಿಲಿಕಾನ್ ಸಿಟಿಯಲ್ಲಿ ಮಳೆಗೆ ಎರಡನೇ ಬಲಿ – ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಯುವಕ…

40
firstsuddi

ಬೆಂಗಳೂರು: ನಿನ್ನೆ ನಗರದಲ್ಲಿ ಸುರಿದ ಮಹಾಮಳೆಗೆ ಯುವಕನೋರ್ವ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಘಟನೆ ಕೆಪಿ ಅಗ್ರಹಾರದ ಬಳಿ ನಡೆದಿದೆ.

ಕೊಚ್ಚಿ ಹೋಗಿದ್ದ ಯುವಕನನ್ನು ಲೋಕೇಶ್ (27) ಎಂದು ಗುರುತಿಸಲಾಗಿದೆ. ಯುವಕನ ಮೃತದೇಹ ಇಂದು ಬ್ಯಾಟರಾಯನಪುರದ ರಾಜಕಾಲುವೆ ಬಳಿ ಪತ್ತೆಯಾಗಿದೆ. ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ.

ಅವೈಜ್ಞಾನಿಕ ರಾಜಕಾಲುವೆ ಕಾಮಗಾರಿಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಕೆ.ಆರ್. ಸರ್ಕಲ್ ಬಳಿ ಅಂಡರ್ ಪಾಸ್​ನಲ್ಲಿ ಕಾರು ಮುಳುಗಿ ಟೆಕ್ಕಿ ಭಾನುರೇಖಾ ಎಂಬುವವರು ಸಾವನ್ನಪ್ಪಿದ್ದರು. ಈಗ ಯುವಕನ ಸಾವು ಮಳೆಯಿಂದ ಆದ ಎರಡನೇ ದುರ್ಘಟನೆ ಆಗಿದೆ.