ಸುಮಲತಾ ಅಂಬರೀಶ್ ಅವರಿಗೆ ಯೋಧ ಆರ್. ಸಿ. ನಾಯಕ್ ಹಾಕಿದ್ದ ಮೊದಲ ಮತ ಅಸಿಂಧು…

227
firstsuddi

ಬೆಂಗಳೂರು : ಮಂಡ್ಯ ಲೋಕಸಭಾ ಚುನಾವಣಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಮೊದಲ ಮತದಾನ ಮಾಡಿದ್ದ ಸಿ ಆರ್ ಪಿ ಎಫ್ ಯೋಧ ಆರ್. ಸಿ. ನಾಯಕ್ ಅವರ ವೋಟ್‍ನ್ನು ತಿರಸ್ಕರಿಸುವಂತೆ ಚುನಾವಣಾ ಆಯೋಗವು ಆದೇಶ ಹೊರಡಿಸಿದ್ದು, ಪೋಸ್ಟಲ್ ಬ್ಯಾಲೆಟ್ ಪೇಪರ್‍ನಲ್ಲಿ ಮತದಾನ ಮಾಡಿದ್ದನ್ನು ಫೋಟೋ ತೆಗೆದು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದರು. ಫೋಟೋ ವೈರಲ್ ಆಗುತ್ತಿದ್ದಂತೆ ಸುಮಲತಾ ಅಂಬರೀಶ್ ಅವರು ಯೋಧರಿಗೆ ಧನ್ಯವಾದವನ್ನು ತಿಳಿಸಿದರು. ಹೀಗಾಗಿ ಯೋಧ ಆರ್.ಸಿ. ನಾಯಕ್ ಅವರ ವಿರುದ್ಧ ದೂರು ದಾಖಲಾಗಿದ್ದು, ಪ್ರಕರಣವನ್ನು ತೆಗೆದುಕೊಂಡ ನ್ಯಾಯಾಲಯ ಚುನಾವಣಾ ಆಯೋಗ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿದರು. ಹೀಗಾಗಿ ಯೋಧ ಮಾಡಿದ ಮತದಾನವನ್ನು ತಿರಸ್ಕರಿಸಲು ಚುನಾವಣಾ ಆಯೋಗ ಆದೇಶಿಸಿದೆ.