ನಿನ್ನೆಯಿಂದ ದುಬೈನ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದ್ದು, ದಕ್ಷಿಣ ಭಾರತದ ಅನೇಕ ತಾರೆಯರು ಭಾಗಿ ಆಗಿದ್ದಾರೆ. ಕನ್ನಡವೂ ಸೇರಿದಂತೆ, ಹಲವು ಭಾಷೆಯ ಚಿತ್ರಗಳಿಗೆ ಮತ್ತು ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಕನ್ನಡ ಚಿತ್ರರಂಗದಿಂದ ಕಾಂತಾರ ಸಿನಿಮಾ ಹೆಚ್ಚು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಈ ಬಾರಿ ಕನ್ನಡ ಭಾಷೆಯಲ್ಲಿನ ಸೈಮಾ ಅವಾರ್ಡ್ ಗೆದ್ದವರ ಪೂರ್ತಿ ಪಟ್ಟಿ ಕೆಳಗಿನಂತಿದೆ.
ಅತ್ಯುತ್ತಮ ನಟ: ಯಶ್ (ಕೆಜಿಎಫ್: ಚಾಪ್ಟರ್ 2), ಅತ್ಯುತ್ತಮ ನಟಿ: ಶ್ರೀನಿಧಿ ಶೆಟ್ಟಿ (ಕೆಜಿಎಫ್: ಚಾಪ್ಟರ್ 2), ಅತ್ಯುತ್ತಮ ನಟ (ಕ್ರಿಟಿಕ್ಸ್): ರಿಷಬ್ ಶೆಟ್ಟಿ (ಕಾಂತಾರ) ,ಅತ್ಯುತ್ತಮ ಸಿನಿಮಾ: 777 ಚಾರ್ಲಿ (ನಿರ್ದೇಶನ- ಕಿರಣ್ ರಾಜ್), ಅತ್ಯುತ್ತಮ ಸಂಗೀತ: ಅಜನೀಶ್ ಬಿ. ಲೋಕನಾಥ್ (ಕಾಂತಾರ), ಅತ್ಯುತ್ತಮ ಹಾಸ್ಯನಟ: ಪ್ರಕಾಶ್ ತುಮ್ಮಿನಾಡು (ಕಾಂತಾರ), ಅತ್ಯುತ್ತಮ ಗಾಯಕ: ವಿಜಯ್ ಪ್ರಕಾಶ್ (ಸಿಂಗಾರ ಸಿರಿಯೇ), ಅತ್ಯುತ್ತಮ ಪೋಷಕ ನಟ: ದಿಗಂತ್ ಮಂಚಾಲೆ (ಗಾಳಿಪಟ 2), ಅತ್ಯುತ್ತಮ ಖಳನಟ: ಅಚ್ಯುತ್ ಕುಮಾರ್ (ಕಾಂತಾರ).
ಅತ್ಯುತ್ತಮ ಗಾಯಕಿ: ಸುನಿಧಿ ಚೌಹಾಣ್ (ರಾರಾ ರಕ್ಕಮ್ಮ), ಅತ್ಯುತ್ತಮ ಹೊಸ ನಟ: ಪೃಥ್ವಿ ಶ್ಯಾಮನೂರು (ಪದವಿ ಪೂರ್ವ), ಅತ್ಯುತ್ತಮ ಛಾಯಾಗ್ರಹಣ: ಭುವನ್ ಗೌಡ (ಕೆಜಿಎಫ್ 2), ಅತ್ಯುತ್ತಮ ನಟಿ (ಕ್ರಿಟಿಕ್ಸ್): ಸಪ್ತಮಿ ಗೌಡ (ಕಾಂತಾರ), ಅತ್ಯುತ್ತಮ ನಟ (ವಿಶೇಷ ಮೆಚ್ಚುಗೆ ಪ್ರಶಸ್ತಿ): ರಕ್ಷಿತ್ ಶೆಟ್ಟಿ (777 ಚಾರ್ಲಿ), ಅತ್ಯುತ್ತಮ ಹೊಸ ನಟಿ: ನೀತಾ ಅಶೋಕ್ (ವಿಕ್ರಾಂತ್ ರೋಣ), ಅತ್ಯುತ್ತಮ ಹೊಸ ನಿರ್ಮಾಣ: ಅಪೇಕ್ಷಾ ಪುರೋಹಿತ್, ಪವನ್ ಒಡೆಯರ್ (ಡೊಳ್ಳು), ಅತ್ಯುತ್ತಮ ಪೋಷಕ ನಟಿ: ಶುಭಾ ರಕ್ಷಾ (ಹೋಮ್ ಮಿನಿಸ್ಟರ್).
ಇನ್ನೂ ಅನೇಕರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದು, ಇನ್ನೂ ಹಲವು ಪ್ರಶಸ್ತಿಗಳು ಕನ್ನಡಕ್ಕೆ ಬರಲಿವೆ. ಜೊತೆಗೆ ತಮಿಳು, ತೆಲುಗು ಮತ್ತು ಮಲೆಯಾಳಂ ಸಿನಿಮಾ ರಂಗಕ್ಕೂ ಪ್ರತ್ಯೇಕವಾಗಿಯೇ ಪ್ರಶಸ್ತಿಗಳನ್ನು ನೀಡಲಾಗಿದೆ.










