ಸ್ಪೈಸ್ ಜೆಟ್ ವಿಮಾನದಲ್ಲಿ ಸೋನು ಸೂದ್ ಭಾವಚಿತ್ರ : ನಟನಿಗೆ ವಿಶೇಷ ಗೌರವ…

136
Firstsuddi

ಮುಂಬೈ : ಸಿನಿಮಾಗಳಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುವ ಸೋನು ಸೂದ್ ಅವರು ರಿಯಲ್ ಲೈಫ್ ನಲ್ಲಿ ಹೀರೋ ಆಗಿದ್ದಾರೆ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಬಡವರಿಗೆ ಮಾಡಿದ ಸಹಾಯವನ್ನು ಮೆಚ್ಚಿ ಖಾಸಗಿ ವಿಮಾನ ಸಂಸ್ಥೆಯೊಂದು ವಿಮಾನದ ಮೇಲೆ ಸೋನು ಸೂದ್ ಅವರ ಭಾವಚಿತ್ರ ಬಿಡಿಸಿ ವಿಶೇಷ ಮತ್ತು ವಿಭಿನ್ನವಾದ ಗೌರವ ಸಲ್ಲಿಸಿದೆ.

ಈ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಸೋನು ಸೂದ್ ಅವರು ಈ ಮೋಗಾದಿಂದ ಮುಂಬೈಗೆ ಹೋಗುವ ವಿಮಾನದಲ್ಲಿ ನಾನು ಟಿಕೆಟ್ ಇಲ್ಲದೆ ಪ್ರಯಾಣ ಮಾಡುತ್ತಿದ್ದೇನೆ. ಈ ಸಮಯದಲ್ಲಿ ನನ್ನ ಪೋಷಕರಿರಬೇಕಿತ್ತು, ನನ್ನ ಅಪ್ಪ, ಅಮ್ಮನನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಎಲ್ಲರಿಗೂ ಧನ್ಯವಾದಗಳು ಎಂದು ಫೋಟೋ ಹಾಕಿ ಟ್ವಿಟ್ ಮಾಡಿ ಸಂತೋಷವನ್ನು ಹಂಚಿಕೊಂಡಿದ್ದಾರೆ. ಇನ್ನೂ ಸ್ಪೈಸ್ ಜೆಟ್ ಮಾಡಿರುವ ಕೆಲಸಕ್ಕೆ ಹಲವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.