ಸ್ಮಾರ್ಟ್‍ಫೋನ್ ಖರೀದಿಗಾಗಿ ರಕ್ತ ಮಾರಲು ಮುಂದಾದ 16 ವರ್ಷದ ಹುಡುಗಿ!

50
firstsuddi

ಕೋಲ್ಕತ್ತಾ : 16 ವರ್ಷದ ಹುಡುಗಿಯೊಬ್ಬಳು ಮೊಬೈಲ್ ಖರೀದಿಗಾಗಿ ರಕ್ತವನ್ನು ಮಾರಾಟ ಮಾಡಲು ಮುಂದಾದ ಆಘಾತಕಾರಿ ಘಟನೆಯೊಂದು ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ.

ದಕ್ಷಿಣ ದಿನಾಜ್ ಪುರದ ತಪನ್ ಪೊಲೀಸ್ ಠಾಣೆಯ ಕರ್ದಾ ನಿವಾಸಿಯಾಗಿರುವ ಆಕೆ 12ನೇ ತರಗತಿ ಓದುತ್ತಿದ್ದಾಳೆ. ಆಕೆ 9000 ರೂ. ಮೌಲ್ಯದ ಸ್ಮಾರ್ಟ್ ಫೋನ್ ಅನ್ನು ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದಾಳೆ. ಆದರೆ ಆಕೆಯ ಬಳಿ ಅಷ್ಟೊಂದು ಹಣವಿರಲಿಲ್ಲ. ಹೀಗಾಗಿ ಆಕೆ ಬಲೂರ್ ಘಾಟ್ ನಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತವನ್ನು ಕೊಡಲು ನಿರ್ಧರಿಸಿದ್ದಾಳೆ.

ಅದರಂತೆಯೇ ಆಸ್ಪತ್ರೆಗೆ ತೆರಳಿ ಅಲ್ಲಿ, ರಕ್ತ ನೀಡುತ್ತೇನೆ ಅದರ ಬದಲು ಎಷ್ಟು ಹಣ ನೀಡುತ್ತೀರಿ ಎಂದು ಕೇಳಿದ್ದಾಳೆ. ಇದರಿಂದ ಅಲ್ಲಿನ ಸಿಬ್ಬಂದಿಗಳು ಅನುಮಾನಗೊಂಡಿದ್ದಾರೆ. ಕೂಡಲೇ ಆಸ್ಪತ್ರೆ ಸಿಬ್ಬಂದಿ ಚೈಲ್ಡ್ ಕೇರ್ ಇಲಾಖೆಗೆ ತಿಳಿಸಿದ್ದಾರೆ.

ಚೈಲ್ಡ್ ಕೇರ್ ಡಿಪಾರ್ಟ್ಮೆಂಟ್ ನ ಸದಸ್ಯೆ ರೀಟಾ ಮಹ್ತೋ ಈ ಹುಡುಗಿಯೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಸದ್ಯದಲ್ಲೇ ನನ್ನ ಸ್ಮಾರ್ಟ್ಫೋನ್ ಡೆಲಿವರಿ ಆಗಲಿದೆ. ಅದಕ್ಕಾಗಿ ಹಣವನ್ನು ಹೊಂದಿಸಲು ಹೀಗೆಲ್ಲ ಯೋಚಿಸಿದೆ ಎಂದು ತಿಳಿಸಿದ್ದಾಳೆ.