ಸ್ಯಾಂಡಲ್‍ವುಡ್ ಡ್ರಗ್ಸ್ ಜಾಲ-ಇಬ್ಬರು ಕಿರುತೆರೆ ಸ್ಟಾರ್ ಗಳಿಗೆ ಸಿಸಿಬಿ ನೊಟೀಸ್…

178
firstsuddi

ಬೆಂಗಳೂರು : ಸ್ಯಾಂಡಲ್‍ವುಡ್ ಡ್ರಗ್ಸ್ ಜಾಲ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಕಿರುತೆರೆ ನಟ ಅಭಿಶೇಕ್ ಹಾಗೂ ನಟಿ ಗೀತಾಭಾರತಿ ಭಟ್ ಅವರಿಗೆ ನೋಟೀಸ್ ನೀಡಿದ್ದು, ಇಂದು ಬೆಳಿಗ್ಗೆ ಅವರ ವಿಚಾರಣೆ ನಡೆಸಲಿದ್ದಾರೆ. ಈಗಾಗಲೇ ಅಧಿಕಾರಿಗಳು ನಟ ಲೂಸ್ ಮಾದ ಯೋಗೀಶ್ ಹಾಗೂ ಮಾಜಿ ಕ್ರಿಕೆಟಿಗ ಎನ್.ಸಿ. ಅಯ್ಯಪ್ಪ, ಸೀರಿಯಲ್ ನಟಿ ರಶ್ಮಿ ಚೆಂಗಪ್ಪ, ಖಾಸಗಿ ವಾಹಿನಿ ಸಿಬ್ಬಂದಿ ನಿಶ್ಚಿತಾ ಶರತ್ ಅವರ ವಿಚಾರಣೆಯನ್ನು ನಡೆಸಲಾಗಿದ್ದು, 12 ಮಂದಿಗೆ ನೊಟೀಸ್ ನೀಡಲಾಗಿದೆ. ಈಗಾಗಲೇ ಸಿಸಿಬಿ ಅಧಿಕಾರಿಗಳು ವಿಚಾರಣೆ ವೇಳೆ ಸಿನಿಮಾ ನಟ ಹಾಗೂ ನಟಿಯರಿಗೆ ಡ್ರಗ್ ಪೂರೈಕೆ ಮಾಡುತ್ತಿರುವುದರ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿದ್ದು, ಆ ಹೆಸರಿನಲ್ಲಿ ಹಲವು ರಾಜಕೀಯ ಮುಖಂಡರುಗಳ ಮಕ್ಕಳು, ಅಧಿಕಾರಿಗಳ ಮಕ್ಕಳು ಹಾಗೂ ಸಿನಿಮಾ ನಟ ನಟಿಯರ ಹೆಸರು ಕೇಳಿ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.