ಮಂಡ್ಯ : ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರು ಗೆಲುವನ್ನು ಸಾಧಿಸಿದ್ದು, ಅಂಬರೀಶ್ ಅವರ ಹುಟ್ಟುಹಬ್ಬ ಹಾಗೂ ಸುಮಲತಾ ಅಂಬರೀಶ್ ಅವರ ಗೆಲುವಿನ ಅಂಗವಾಗಿ ಮಂಡ್ಯದಲ್ಲಿ ಇಂದು ಸ್ವಾಭಿಮಾನಿ ಸಮಾವೇಶವನ್ನು ಏರ್ಪಡಿಸಲಾಗಿದೆ. ಈ ವೇಳೆ ಅಂಬರೀಶ್ ಅವರ ಅಭಿಮಾನಿ ನಾರಾಯಣ ಕಲಾಲ್ ಎಂಬುವವರು ಐದು ಕ್ವಿಂಟಾಲ್ ಧಾರವಾಡ ಪೇಡವನ್ನು ಮಂಡ್ಯದ ಜನತೆಗೆ ಹಂಚಿಕೆ ಮಾಡಲು ರವಾನಿಸಿದ್ದು, ತಯಾರಾಗಿರುವ ಪೇಡಾವನ್ನು ವಿಶೇಷ ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಲಾಗಿದ್ದು, ಹಾಗೆಯೇ ಮಂಡ್ಯದ ಅಭಿಮಾನಿ ಶಶಿಕುಮಾರ್ ಅವರು 20ಸಾವಿರ ಲಡ್ಡು ತಯಾರಿಸಿದ್ದು, ಸಮಾವೇಶಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಲಡ್ಡು ಹಾಗೂ ಪೇಡಾವನ್ನು ಹಂಚಲಾಗುತ್ತದೆ.










