ಹೈದರಾಬಾದ್ : ವಿಶಾಖಪಟ್ಟಣಂನಿಂದ ಹೈದರಾಬಾದ್ ಗೆ ಹೊರಟಿದ್ದ ಗೋದಾವರಿ ಎಕ್ಸ್ಪ್ರೆಸ್ ರೈಲು ಹೈದರಾಬಾದ್ ನ ಉಪನಗರದ ಬೀಬಿನಗರ ಬಳಿ ಇಂದು ಮುಂಜಾನೆ ಹಳಿ ತಪ್ಪಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಅಧಿಕಾರಿಗಳ ಮಾಹಿತಿಯ ಪ್ರಕಾರ, ಎಸ್-1, ಎಸ್-4 ಜಿಎಸ್ ಹಾಗೂ ಎಸ್ ಎಲ್ ಆರ್ ಕೋಚ್ ಗಳು ಹಳಿತಪ್ಪಿದ್ದು, ಪ್ರಯಾಣಿಕರಿಗೆ ಗಾಯಗಳು ಸಂಭವಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಘಟನೆ ಬೆನ್ನಲ್ಲೇ ಪ್ರಯಾಣಿಕರನ್ನು ರೈಲಿನಿಂದ ಕೆಳಗೆ ಇಳಿಸಲಾಗಿದೆ. ಘಟನೆ ಕುರಿತು ರೈಲ್ವೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.










