ಹಳ್ಳಿ ಸೊಗಡಿನ ಅಡುಗೆ ಮಾಡುವ ಮೂಲಕ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ಅಜ್ಜ ನಾರಾಯಣ ರೆಡ್ಡಿ ನಿಧನ…

388
firstsuddi

ತೆಲಂಗಾಣ : ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ಖಾದ್ಯಪ್ರಿಯರ ಮನಗೆದ್ದಿದ್ದ ಅಜ್ಜ ನಾರಾಯಣ ರೆಡ್ಡಿ ಅವರು ಮೃತಪಟ್ಟಿದ್ದಾರೆ.  ನಾರಾಯಣ ರೆಡ್ಡಿ ಅವರಿಗೆ 73 ವರ್ಷ ವಯಸ್ಸಾಗಿದ್ದು, ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕಳೆದ ಭಾನುವಾರ ಮೃತಪಟ್ಟಿದ್ದು, ಅವರು ಮೃತಪಟ್ಟಿರುವ ವಿಚಾರವನ್ನು ಅವರ ಗ್ರ್ಯಾಂಡ್ ಕಿಚನ್ ಯೂಟ್ಯೂಬ್ ಚಾನೆಲ್‍ನಲ್ಲಿ ಬಹಿರಂಗಪಡಿಸಿದ್ದಾರೆ. ನಾರಾಯಣ ರೆಡ್ಡಿ ಅವರ ಹಳ್ಳಿ ಸೊಗಡಿನ ಖಾದ್ಯಗಳು ಯೂಟ್ಯೂಬ್‌ನಲ್ಲಿ ಪ್ರಸಿದ್ದಿ ಪಡೆದಿದ್ದವು. ಅವರ  ಯೂಟ್ಯೂಬ್ ಚಾನೆಲ್‌ ಗೆ 60 ಲಕ್ಷಕ್ಕೂ ಹೆಚ್ಚು ಚಂದಾದಾರರಿದ್ದರು.