ಹಾಸನ ಜಿಲ್ಲೆಗೂ ವಕ್ಕರಿಸಿದ ಕೊರೊನಾ-ಒಂದೇ ಕುಟುಂಬದ ಐವರಿಗೆ ಕೊರೊನಾ ಸೋಂಕು…

241
firstsuddi

ಹಾಸನ : ಗ್ರೀನ್ ಜೋನ್ ಜಿಲ್ಲೆಗೆ ಸೇರಿಕೊಂಡಿದ್ದ ಹಾಸನ ಜಿಲ್ಲೆಗೂ ಮಹಾಮಾರಿ ಕೊರೊನಾ ವೈರಸ್ ವಕ್ಕರಿಸಿದ್ದು, ಮುಂಬೈನಿಂದ ಬಂದ ಒಂದೇ ಕುಟುಂಬದ 5 ಮಂದಿಯಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಸೋಂಕಿತರು ಮೇ 8ರಂದು ಮುಂಬೈನಿಂದ ಹಾಸನಕ್ಕೆ ಆಗಮಿಸಿದ್ದು, ಈ ವೇಳೆ ಪೊಲೀಸರು ಅವರನ್ನು ಗಡಿಯಲ್ಲೇ ತಡೆದು ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು. ಬಳಿಕ ಅವರ ಗಂಟಲಿನ ದ್ರವ, ಹಾಗೂ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರಂತೆ ಇಂದು ಬಂದ ವರದಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಐವರಿಗೆ ಸೋಂಕು ತಗುಲಿರುವುದು ದೃಢವಾಗಿದ್ದು, ಈವರೆಗೆ ಒಂದೇ ಒಂದು ಕೊರೊನಾ ಪ್ರಕರಣವಿಲ್ಲದೆ ಗ್ರೀನ್ ಜೋನ್ ಪಟ್ಟಿಯಲ್ಲಿದ್ದ ಜಿಲ್ಲೆ ರೆಡ್ ಜೋನ್ ಪಟ್ಟಿಗೆ ಸೇರಿಕೊಳ್ಳುವ ಸಾಧ್ಯತೆ ಇದೆ.