ಹಾಸನ : ಇಂದು ಮಧ್ಯಾಹ್ನ ಶಾಸ್ತ್ರೋಕ್ತವಾಗಿ ತೆರೆದ ಹಾಸನಾಂಬೆ ದೇವಿಯ ಬಾಗಿಲು…

374

ಹಾಸನ : ಹಾಸನಾಂಬೆ ದೇವಿಯ ಬಾಗಿಲು ಇಂದು ಮಧ್ಯಾಹ್ನ 12:35ಕ್ಕೆ ಶಾಸ್ತ್ರೋಕ್ತವಾಗಿ ತೆರೆದಿದ್ದು, ಮೈಸೂರು ಅರಸು ವಂಶಸ್ಥರು ಬಾಳೆ ಕಂಬ ಕಡಿದ ಬಳಿಕ ಜಯಘೋಷ, ಮಂಗಳವಾದ್ಯ ಮೊಳಗಿದ್ದು, ಇಂದಿನಿಂದ 13ದಿನಗಳ ಕಾಲ ಭಕ್ತರು ದೇವಿಯ ದರ್ಶನ ಪಡೆಯಲು ಅವಕಾಶವಿದ್ದು, ಅ.17 ಹಾಗೂ ಅ.29 ಒರತುಪಡಿಸಿ ಇಂದಿನಿಂದ ಅ.29ರವರೆಗೂ ಭಕ್ತಾದಿಗಳು ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬೆ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಅ.18ರಿಂದ ಪ್ರತಿದಿನ ಹಾಸನಾಂಬೆ ದೇವಿಗೆ ಪೂಜೆ, ನೈವೇದ್ಯ, ಅರ್ಚನೆ ನಡೆಯಲಿದ್ದು, ಮಧ್ಯಾಹ್ನ 1ರಿಂದ 3ಗಂಟೆ ವರೆಗೂ ಭಕ್ತರಿಗೆ ದರ್ಶನ ಅವಕಾಶವಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ www.hasanamba.com ಲಾಗಿನ್ ಆಗಿ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.