ಶ್ರೀನಗರ : ಜಮ್ಮು-ಕಾಶ್ಮೀರದ ಕುಪ್ವಾರದ ಮಚ್ಚಲ್ ಸೆಕ್ಟರ್ ನಲ್ಲಿ ಸೇನಾ ವಾಹನ ಆಳವಾದ ಕಂದಕಕ್ಕೆ ಉರುಳಿ ಮೂವರು ಭಾರತೀಯ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇಂದು ಮುಂಜಾನೆ ಈ ಘಟನೆ ಸಂಭವಿಸಿದೆ.
ಒಬ್ಬರು ಜೂನಿಯರ್ ಕಮಿಷನ್ಡ್ ಆಫೀಸರ್ ಮತ್ತು ಇಬ್ಬರು ಇತರ ಶ್ರೇಣಿಯ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ವಾಹನವು ಹಿಮದಿಂದ ತುಂಬಿದ ಟ್ರ್ಯಾಕ್ ನಿಂದ ಜಾರಿ ಕಮರಿಗೆ ಬಿದ್ದಿದೆ. ದುರಂತದಲ್ಲಿ ಮೂವರು ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ.
ಫಾರ್ವರ್ಡ್ ಏರಿಯಾದಲ್ಲಿ ಆಪರೇಷನ್ ಕಾರ್ಯದ ಸಂದರ್ಭದಲ್ಲಿ ಈ ವಾಹನ ಕಿರಿಯ ಸೇನಾ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿತ್ತು. ಈ ವೇಳೆ ಈ ಅಪಘಾತ ಸಂಭವಿಸಿದೆ. ಒಬ್ಬರು ಜೆಸಿಒ ಮತ್ತು ಇಬ್ಬರು ಓಆರ್ ಇದ್ದ ವಾಹನ ಪ್ರಯಾಣಿಸುತ್ತಿದ್ದ ರಸ್ತೆಯಲ್ಲಿ ಹಿಮ ತುಂಬಿಕೊಂಡಿತ್ತು. ಇದರಿಂದ ವಾಹನ ಆಳವಾದ ಕಮರಿಗೆ ಜಾರಿತು. ಎಲ್ಲಾ ಮೂವರು ಸೇನಾ ಸಿಬ್ಬಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಚಿನಾರ್ ಕಾರ್ಪ್ಸ್ ತಿಳಿಸಿದೆ.










