ಹೃದಯಾಘಾತದಿಂದ ಆರ್ ಜೆ ರಚನಾ ನಿಧನ…

89
firstsuddi

ಬೆಂಗಳೂರು : ತಮ್ಮ ಕಂಠ ಸಿರಿಯಿಂದಲೇ ಫೇಮಸ್ ಆಗಿದ್ದ ಆರ್ ಜೆ ರಚನಾ(39) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಜೆಪಿ ನಗರದ ಫ್ಲ್ಯಾಟ್ ನಲ್ಲಿ ಆರ್ ಜೆ ರಚನಾಗೆ ಬೆಳಗ್ಗೆ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ರೇಡಿಯೋ ಮಿರ್ಚಿ ಮೂಲಕ ತಮ್ಮ ರೇಡಿಯೋ ಜಾಕಿ ಪಯಣ ಆರಂಭಿಸಿ ನಂತರ ರೇಡಿಯೋ ಸಿಟಿ ಸಂಸ್ಥೆಯಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಏಳು ವರ್ಷಗಳ ಹಿಂದೆ ರಚನಾ ಆರ್.ಜೆ ವೃತ್ತಿಗೆ ವಿದಾಯ ಹೇಳಿದ್ದರು. 

ಕಳೆದ ಕೆಲ ವರ್ಷಗಳಿಂದ ರಚನಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗುತ್ತಿದೆ. ಅಲ್ಲದೇ ಹೆಚ್ಚು ಜನರ ಜತೆ ಬೆರೆಯುತ್ತಿರಲಿಲ್ಲ ಎನ್ನುತ್ತಾರೆ ಅವರ ಸ್ನೇಹಿತರ ಬಳಗ. ರಚನಾ ಸಾವಿಗೆ ಆಪ್ತರು ಹಾಗೂ ಸ್ನೇಹಿತರು ಸಂತಾಪ ಸೂಚಿಸಿದ್ದಾರೆ.

ಇನ್ನೂ ಆರ್.ಜೆ ರಚನಾ ಅವರ ಅಂಗಾಂಗಗಳನ್ನು ದಾನ ಮಾಡಲು ಅವರ ಕುಟುಂಬ ನಿರ್ಧರಿಸಿದೆ. ಈ ಮೂಲಕ ಸಾವಿನಲ್ಲೂ ರಚನಾ ಕುಟುಂಬ ಸಾರ್ಥಕತೆ ಮೆರೆದಿದೆ.