ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸಿಪಿ ಯೋಗೇಶ್ವರ ಪರ ಪ್ರಚಾರ ಮಾಡುತ್ತಿರುವ ವೇಳೆ ಸಚಿವ ಜಮೀರ್ ಅಹ್ಮದ್ ಹೆಚ್‍ಡಿ.ಕುಮಾರಸ್ವಾಮಿ ಅವರನ್ನು “ಕರಿಯ ಕುಮಾರಸ್ವಾಮಿ” ಅಂತ ಸಂಬೋಧಿಸಿದ್ದರು. ಇದರಿಂದ ಜೆಡಿಎಸ್ ಕಾರ್ಯಕರ್ತರು, ನಾಯಕರು ಆಕ್ರೋಶಗೊಂಡಿದ್ದರು. ಇದೀಗ ಜಮೀರ್ ಅಹ್ಮದ್ ಕ್ಷಮೆಯಾಚಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಮುಖಂಡರಿಗೆ ನೋವಾಗಿದ್ದರೇ ಕ್ಷಮೆ ಕೇಳುತ್ತೇನೆ. ನಾನು ಮೊದಲಿನಿಂದಲೂ ಕುಮಾರಸ್ವಾಮಿ ಅವರನ್ನ ಕರಿಯಣ್ಣ ಅಂತಿದ್ದೆ. ನನ್ನನ್ನ ಕುಳ್ಳ ಅಂತಿದ್ದರು. ಈ ಹೇಳಿಕೆಯಿಂದ ಉಪಚುನಾವಣೆಯಲ್ಲಿ ಯಾವುದೇ ಎಫೆಕ್ಟ್ ಆಗಲ್ಲ ಹೇಳಿದರು.










